

ಬೆಂಗಳೂರು: ‘ಚಿತ್ರರಂಗಕ್ಕೆ ಆಗಮಿಸಿದ ಮೊದಲಿಗೆ ಬ್ಯಾಕ್‌ಗ್ರೌಂಡ್ ಆರ್ಟಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದೆ. ಇಷ್ಟಕ್ಕೇನಾ ನಾನು ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದು ಎನಿಸುತ್ತಿತ್ತು. ಹೀಗಾಗಿ ನಟನಾ ತರಬೇತಿ ಪಡೆದು, ವರ್ಕೌಟ್ ಮಾಡಿ, ಸಣ್ಣ ಆದೆ. ಬಳಿಕ ನನಗೆ ಅವಕಾಶಗಳು ಬರತೊಡಗಿವು. ಈಗ ನನ್ನ ಆರು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯ’. - ಇದು ಕರಾವಳಿ ಮೂಲದ ನಟಿ ಸ್ವಪ್ನಾ ಶೆಟ್ಟಿಗಾರ್ ಮಾತು.
ವೇದಾಂತ್ ನಿರ್ದೇಶನದ ದೀಪಕ್ ಪೈ, ದೇವ್ ದೇವಯ್ಯ ಮುಖ್ಯಭೂಮಿಕೆಯಲ್ಲಿರುವ ‘ರಾವೆನ್’ ಸಿನಿಮಾದಲ್ಲಿ ಸ್ವಪ್ನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಲಾಯಿತು. ರಿಲೀಸ್‌ಗೆ ಸಿದ್ಧವಿರುವ ಚಿತ್ರದ ಕುರಿತು ಸ್ವಪ್ನಾ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡು, ‘‘ರಾವೆನ್’ ಹೊಸ ಅನುಭವ ಹಾಗೂ ವಿಚಾರದ ಸಿನಿಮಾ. ಇಲ್ಲಿ ಹಲವು ಪಾತ್ರಗಳಿದ್ದರೂ, ಕಾಗೆಯೇ ಕೇಂದ್ರಬಿಂದು. ಇಲ್ಲಿ ನನ್ನದು ಬರಹಗಾರ್ತಿಯ ಪಾತ್ರ. ಹೊಸ ವಿಚಾರಗಳನ್ನು ಕೆದಕಿ, ಅದರ ಬಗ್ಗೆ ರೀಸರ್ಚ್ ಮಾಡುವ ಪ್ರವೃತ್ತಿ ನನ್ನದು. ಅಂತಹದ್ದೇ ಒಂದು ಹೊಸ ವಿಚಾರವನ್ನು ಕೆದಕಿದಾಗ ಕಥೆ ತೆರೆದುಕೊಳ್ಳುತ್ತದೆ. ಇಂತಹ ಪಾತ್ರವನ್ನು ನಾನು ಮಾಡಿರುವುದು ಇದೇ ಮೊದಲು’ ಎನ್ನುತ್ತಾರೆ.
ಆರು ಸಿನಿಮಾಗಳು ಬಿಡುಗಡೆಗೆ ಸಿದ್ಧ: ಸ್ವಪ್ನಾ ಶೆಟ್ಟಿಗಾರ್ ಕಾಣಿಸಿಕೊಂಡಿದ್ದ ‘ಕ್ಲಾಂತಾ’, ‘1990’’ ಸಿನಿಮಾಗಳು ಇತ್ತೀಚೆಗೆ ತೆರೆಕಂಡಿದ್ದವು. ಇದರ ಬೆನ್ನಲ್ಲೇ, ಆರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್‌ಗೆ ಸಿದ್ಧವಾಗಿವೆ. ಈ ಬಗ್ಗೆ ‘ಸದ್ಯ ನನ್ನ ನಟನೆಯ ‘ರಾವೆನ್’, ‘ಯಾವ ಮೋಹನ ಮುರಳಿ ಕರೆಯಿತು’, ‘ಕಾಣದೂರಿಗೆ’, ‘ಪ್ರೊಡಕ್ಷನ್ ನಂ.2’ ಹಾಗೂ ‘ಡವ್ ಮಾಸ್ಟರ್’ ಸೇರಿ ಒಟ್ಟು ಆರು ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿವೆ. ಪ್ರತಿ ಚಿತ್ರದ ಪಾತ್ರಗಳು ವಿಭಿನ್ನವಾಗಿವೆ. ಇತ್ತೀಚೆಗಷ್ಟೇ ಮತ್ತೊಂದು ಹೊಸ ಪ್ರಾಜೆಕ್ಟ್ ಸಹಿ ಮಾಡಿದ್ದೇನೆ. ಪೊಲೀಸ್ ಹಾಗೂ ಾರೆಸ್ಟ್-ಅಡ್ವೆಂಚರ್ ಪಾತ್ರ ಮಾಡುವಾಸೆ ಇದೆ. ‘ಆಫ್ರಿಕಾದಲ್ಲಿ ಶೀಲಾ’ ಇಂದಿಗೂ ನನ್ನ ೇವರೆಟ್’ ಎಂದು ಖುಷಿ ಹಂಚಿಕೊಳ್ಳುತ್ತಾರೆ.