'ಸುಶಾಂತ್​ಗಾಗಿ ಖರೀದಿಸಲಾಗುತ್ತಿದ್ದ ಡ್ರಗ್ಸ್​ಗೆ ರಿಯಾ ಹಣ ಕೊಡುತ್ತಿರಲಿಲ್ಲ...'

Sushant
Published on

ಮುಂಬೈ: ಸುಶಾಂತ್ ಸಿಂಗ್​​ಗಾಗಿ ನನ್ನ ಸೋದರನ ಮೂಲಕ ಡ್ರಗ್ಸ್​ ಪಡೆಯುತ್ತಿದ್ದೆ ಎಂದು ರಿಯಾ ಚಕ್ರವರ್ತಿ ಈಗಾಗಲೇ ಎನ್​ಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈಗ ಅವರ ಸೋದರ ಶೋವಿಕ್​ ಇನ್ನೊಂದು ಮಹತ್ವದ ವಿಚಾರವನ್ನು ಎನ್​ಸಿಬಿ ಎದುರು ಬಿಚ್ಚಿಟ್ಟಿದ್ದಾನೆ.

ಸುಶಾಂತ್​​ಗಾಗಿ ಖರೀದಿಸಲಾಗುತ್ತಿದ್ದ ಡ್ರಗ್ಸ್​​ಗೆ ನನ್ನ ಸೋದರಿ ಹಣ ನೀಡುತ್ತಿರಲಿಲ್ಲ. ಬದಲಿಗೆ ಸುಶಾಂತ್​ ಮ್ಯಾನೇಜರ್​ ಹಣ ಕೊಡುತ್ತಿದ್ದರು ಎಂದು ಹೇಳಿದ್ದಾನೆ.  ಇದನ್ನೂ ಓದಿ: 18 ಸಾವಿರ ಜನರಿಗೆ ಆಕ್ಸ್​ಫರ್ಡ್​ ವಿವಿ ಲಸಿಕೆ ಪ್ರಯೋಗ; ಮತ್ತೆ ಶುರುವಾಯ್ತು ಕ್ಲಿನಿಕಲ್​ ಟ್ರಯಲ್​

ನಾವು ಪೆಡ್ಲರ್​ ಮೂಲಕ ಖರೀದಿಸುತ್ತಿದ್ದ ಡ್ರಗ್ಸ್​ಗೆ ಸುಶಾಂತ್​ ಸಿಂಗ್​ ಮ್ಯಾನೇಜರ್​​ ಸ್ಯಾಮ್ಯುಯೆಲ್​ ಮಿರಂಡಾ ಹಣ ನೀಡುತ್ತಿದ್ದ. ಒಂದು ಬಾರಿ ಮಾತ್ರ ರಿಯಾ ತನ್ನ ಕ್ರೆಡಿಟ್​ ಕಾರ್ಡ್​ನಿಂದ ಹಣ ಕಳಿಸಿದ್ದಳು. ಅದು ಬಿಟ್ಟರೆ ಡ್ರಗ್ಸ್ ಸಂಬಂಧಿತ ಖರ್ಚುವೆಚ್ಚಗಳನ್ನೆಲ್ಲ ಸುಶಾಂತ್​ ಮತ್ತು ಅವರ ಮ್ಯಾನೇಜರ್​​ ಭರಿಸುತ್ತಿದ್ದರು. ವ್ಯವಹಾರವನ್ನೂ ಅವರೇ ನೋಡಿಕೊಳ್ಳುತ್ತಿದ್ದರು ಎಂದು ಶೋವಿಕ್​ ಮಾಹಿತಿ ನೀಡಿದ್ದಾನೆ. ಅಷ್ಟೇ ಅಲ್ಲ, ಡ್ರಗ್ಸ್​ ವ್ಯವಹಾರದಲ್ಲಿ ನಾವು ನಮ್ಮ ಕೈಯಿಂದ ಸುಶಾಂತ್​ಗೆ ಹಣವನ್ನು ನೀಡಲೂ ಇಲ್ಲ..ಅವರಿಂದ ಪಡೆಯಲೂ ಇಲ್ಲ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಗಂಡ-ಹೆಂಡ್ತಿ ನಡುವೆ ಈ ನಾಯಿಯ ಕೂದಲು ತಂದಿಟ್ಟ ಫಜೀತಿ ಅಷ್ಟಿಷ್ಟಲ್ಲ!

ಸುಶಾಂತ್​ ದಿನಕ್ಕೆ ನಾಲ್ಕರಿಂದ ಐದು ಬಾರಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂದು ಸೋದರಿ ರಿಯಾ ನನಗೆ ವಾಟ್ಸ್​ಆ್ಯಪ್​ ಚಾಟ್​​ನಲ್ಲಿ ತಿಳಿಸಿದ್ದಳು. ನಂತರ ನಾನು ಐದು ಗ್ರಾಂಗಳಷ್ಟು ಗಾಂಜಾ ನೀಡುವುದಾಗಿ ತಿಳಿಸಿದ್ದೆ. ಅದಕ್ಕಾಗಿ ನನ್ನ ಸ್ನೇಹಿತ ಅಬ್ದೆಲ್ ಬಸಿತ್ ಪರಿಹಾರ್​​ನನ್ನು ಭೇಟಿಯಾಗಿ, ಗಾಂಜಾವನ್ನು ಎಲ್ಲಿಂದ ಸಂಗ್ರಹಿಸಬಹುದು, ಅದರ ಬೆಲೆಯ ಬಗ್ಗೆ ಎಲ್ಲ ಚರ್ಚಿಸಿದೆ. ಬೆಲೆಯನ್ನು ರಿಯಾ ಮತ್ತು ಸ್ಯಾಮ್ಯುಯೆಲ್​ಗೆ ತಿಳಿಸಿದ್ದೆ. ನಂತರ ಸ್ಯಾಮ್ಯುಯೆಲ್​ ಹಣ ನೀಡಿದ್ದರು. ಇದು ಹೀಗೆ ಮುಂದುವರಿದಿತ್ತು ಎಂದೂ ಹೇಳಿದ್ದಾನೆ.

ಸುಶಾಂತ್​ ಸಾವಿನ ಪ್ರಕರಣದಲ್ಲಿ ಡ್ರಗ್ಸ್​ ಲಿಂಕ್​ಗೆ ಸಂಬಂಧಪಟ್ಟಂತೆ ರಿಯಾ ಹಾಗೂ ಶೋವಿಕ್​ನನ್ನು ಎನ್​ಸಿಬಿ ಬಂಧಿಸಿದೆ. ಎನ್​​ಡಿಪಿಎಸ್​ ಆ್ಯಕ್ಟ್​​ನಡಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಜಾಮೀನು ಅರ್ಜಿಯೂ ತಿರಸ್ಕೃತಗೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net