ಆತ್ಮಹತ್ಯೆ ಹಿಂದೆ ರಿಯಾ ಕೈವಾಡ ... ಸುಶಾಂತ್ ಬಾಡಿಗಾರ್ಡ್​ ಅನುಮಾನ

Rhea Chakraborty - Final
Published on

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವುದಾಗಿ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದು, ಯಾಕೆ ತಮಗೆ ಸುಶಾಂತ್​ ಸಾವಿಗೆ ರಿಯಾ ಕಾರಣ ಎಂದನಿಸುತ್ತಿದೆ ಎಂದು ಎಂಟು ಅಂಶಗಳನ್ನು ಪಟ್ಟಿ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.

ಈಗ ಸುಶಾಂತ್​ ಅವರ ಬಾಡಿಗಾರ್ಡ್​ ಸಹ ರಿಯಾ ವಿರುದ್ಧ ಕೆ.ಕೆ. ಸಿಂಗ್​ ವ್ಯಕ್ತಪಡಿಸಿರುವ ಅನುಮಾನ ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ, ಸುಶಾಂತ್​ ಆತ್ಮಹತ್ಯೆಯ ಹಿಂದೆ ರಿಯಾ ಕೈವಾಡವಿದೆ ಎಂದು ಸಹ ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಸುಶಾಂತ್​ ಯಾವಾಗಲೂ ಮಲಗಿರುತ್ತಿದ್ದರೆ, ರಿಯಾ ಅವರ ಕುಟುಂಬದವರು ಪಾರ್ಟಿ ಮಾಡುತ್ತಿದ್ದರು. ರಿಯಾ ಬಂದ ನಂತರ ಸುಶಾಂತ್​ ಅವರಲ್ಲಿ ಸಾಕಷ್ಟು ಬದಲಾವಣೆ ಆಯಿತು. ಅಷ್ಟೇ ಅಲ್ಲ, ನನ್ನೊಬ್ಬನನ್ನು ಬಿಟ್ಟು ಸುಶಾಂತ್​ ಮನೆಯ ಎಲ್ಲಾ ಕೆಲಸದವರನ್ನು ರಿಯಾ ಬದಲಾಯಿಸಿದರು. ಸುಶಾಂತ್​ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯೇ ಅಲ್ಲ. ನನಗಂತೂ ಅವರ ಸಾವಿನ ಹಿಂದೆ ರಿಯಾ ಕೈವಾಡ ಇದೆ ಎಂದನಿಸುತ್ತಿದೆ. ಈ ಕುರಿತು ಸೂಕ್ತ ತನಿಖೆ ಆಗಬೇಕು' ಎಂದು ಆಗ್ರಹಿಸಿದ್ದಾರೆ.

'ಯೂರೋಪ್​ನಿಂದ ವಾಪಸ್ಸಾದ ಸುಶಾಂತ್​ ಆರೋಗ್ಯ ಕೆಟ್ಟಿತು. ಅವರು ಯಾವಾಗಲೂ ಮಲಗಿರುತ್ತಿದ್ದರು. ಅದಕ್ಕೂ ಮುನ್ನ ಅವರು ಬಹಳ ಆಕ್ಟಿವ್​ ಆಗಿದ್ದರು. ಸ್ವಿಮ್ಮಿಂಗ್​, ರನ್ನಿಂಗ್​, ಜಿಮ್ಮಿಂಗ್​ ಅಂತ ಬ್ಯುಸಿಯಾಗಿದ್ದರು. ವಾಪಸ್ಸು ಬಂದ ನಂತರ ಸುಶಾಂತ್​ ಮಂಕಾದರು. ಕ್ರಮೇಣ ರಿಯಾ ಅವರ ಮನೆಯ ಮೇಲೆ ಹಿಡಿತ ಸಾಧಿಸಿದರು. ಅವರ ಬಂಧು-ಮಿತ್ರರು ಬಂದು ಹೋಗುವುದು ಜಾಸ್ತಿ ಆಯಿತು' ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net