ಆರು ತಿಂಗಳಲ್ಲಿ ಏಳು ಸಿನಿಮಾ ಕಳೆದುಕೊಂಡಿದ್ದರಂತೆ ಸುಶಾಂತ್​!

Sushant - Final
Published on

ಕಳೆದ ವರ್ಷ ಚಿಚ್ಚೋರೆಯಂತಹ ಸೂಪರ್​ ಹಿಟ್​ ಚಿತ್ರಗಳನ್ನು ನೀಡಿದರೂ, ಸುಶಾಂತ್​ ಸಿಂಗ್​ ಕೈಯಲ್ಲಿ ಯಾವುದೇ ಚಿತ್ರಗಳಿರಲಿಲ್ಲ, ಅದೇ ಬೇಸರದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ, ಕಳೆದೆರೆಡು ದಿನಗಳಿಂದ ಕೇಳಿ ಬರುತ್ತಲೇ ಇದೆ. ಬಾಲಿವುಡ್​ನ ಕೆಲವು ಭಲಾಡ್ಯರು ತಮ್ಮನ್ನು ದೂರ ಇಟ್ಟ ಕಾರಣಕ್ಕೆ, ಸುಶಾಂತ್​ ಮಾನಸಿಕವಾಗಿ ನೊಂದಿದ್ದರು ಮತ್ತು ಅದೇ ಅವರ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಾವಿನ ಬಾಗಿಲು ತಟ್ಟಿ ಮರಳಿದ್ದರು ಶಿಲ್ಪಾ ಶೆಟ್ಟಿ ಸಹೋದರಿ

ಇದಕ್ಕೆ ಪೂರಕವಾಗಿ ರಾಜಕಾರಣಿ ಸಂಜಯ್​ ನಿರುಪಮ್​ ಮಾತನಾಡಿದ್ದು, ಚಿಚ್ಚೋರೆ ನಂತರ ಸುಶಾಂತ್​ ಸಿಂಗ್​ ಅವರು ಕಳೆದ ಆರು ತಿಂಗಳಲ್ಲಿ ಏಳು ಸಿನಿಮಾಗಳನ್ನು ಕಳೆದುಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ಸುಶಾಂತ್​ ಕಳೆದ ವರ್ಷ ಚಿಚ್ಚೋರೆ ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತರ ಸೂಪರ್​ ಹಿಟ್​ ಆಗಿತ್ತು. ಆ ನಂತರ ಅವರು ಏಳು ಚಿತ್ರಗಳಲ್ಲಿ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಆ ಏಳೂ ಚಿತ್ರಗಳು ಸುಶಾಂತ್​ ಸಿಂಗ್​ ಅವರ ಕೈತಪ್ಪಿದ್ದವು. ಇದರಿಂದ ಅವರು ಮಾನಸಿಕವಾಗಿ ಬಹಳ ನೊಂದಿದ್ದರು. ಬಾಲಿವುಡ್​ ಮಂದಿಯ ಈ ಕ್ರೂರ ನಡೆಯಿಂದಾಗಿ ಸುಶಾಂತ್​ರಂತಹ ಪ್ರತಿಭಾವಂತ ಕಲಾವಿದರು ಎಂದು ಸಂಜಯ್​ ನಿರುಪಮ್​ ಹೇಳಿದ್ದಾರೆ. ಸುಶಾಂತ್​ ಸಿಂಗ್​ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಕೆಲವೇ ಕೆಲವು ಮಂದಿ ಪೈಕಿ ಸಂಜಯ್​ ನಿರುಪಮ್​ ಸಹ ಒಬ್ಬರು ಎನ್ನುವುದು ಗಮನಾರ್ಹ.

ಇದನ್ನೂ ಓದಿ: ಸೋತವರೆಂದಿಗೂ ಸಾಯುವುದಿಲ್ಲ.. ನೀವ್ಯಾಕೆ ಹೀಗೆ ಮಾಡಿದಿರಿ ಸುಶಾಂತ್?

ಇನ್ನು ಸಂಜಯ್​ ನಿರುಪಮ್​ ಅವರ ಮಾತು ಪೂರ್ತಿ ಸುಳ್ಳೇನಲ್ಲ. ಏಕೆಂದರೆ, ಸುಶಾಂತ್​ ಸಿಂಗ್​ ಅವರ ಹೆಸರು ಹಲವು ಚಿತ್ರಗಳಲ್ಲಿ ಕೇಳಿಬಂದಿತ್ತು. ಭಾರತ ಮತ್ತು ಚೀನಾ ನಡುವೆ ನಡೆದ 1962ರ ಯುದ್ಧದ ಕುರಿತಾದ ರೈಫಲ್​ಮ್ಯಾನ್​, ಆನಂದ್​ ಗಾಂಧಿ ನಿರ್ದೇಶನದ ಎಮರ್​ಜೆನ್ಸಿ, ಶೇಖರ್​ ಕಪೂರ್​ ನಿರ್ದೇಶನದ ಪಾನಿ ಮುಂತಾದ ಚಿತ್ರಗಳಲ್ಲಿ ಸುಶಾಂತ್​ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈ ಚಿತ್ರಗಳಲ್ಲಿ ಇದೀಗ ಬೇರೆಯವರು ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದಲ್ಲದೆ ವೆಬ್​ ಸೀರೀಸ್​ವೊಂದರಲ್ಲಿ ಅವರು ನಟಿಸಬೇಕಿತ್ತಂತೆ. ಅದು ಸಹ ಅವರ ಕೈತಪ್ಪಿರುವ ಅನುಮಾನಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net