ಇನ್ನು, ಆರ್ಜೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಇತ್ತೀಚಿನ ಚಾಟ್ನಲ್ಲಿ, ಚಾವ್ಲಾ ದೂರದರ್ಶನದಿಂದ ಚಲನಚಿತ್ರಗಳಿಗೆ ಕಾಲಿಡಲು ಪ್ರಯತ್ನಿಸುತ್ತಿರುವಾಗ, ಮುಂಬೈನಲ್ಲಿ ಅವರ ಮೊದಲ ಚಲನಚಿತ್ರ ಸಭೆಯಲ್ಲಿ, ''ಅವರ ನೋಟ, ತೂಕ ಮತ್ತು ಸೊಂಟದ ಗಾತ್ರ, ಎದೆಯ ಗಾತ್ರದ'' ಬಗ್ಗೆ ಪ್ರಶ್ನೆಗಳನ್ನು ಎದುರಿಸಿದರು ಎಂದು ಸಹ ಬಹಿರಂಗವಾಗಿ ಹೇಳಿದ್ದಾರೆ. ಜೊತೆಗೆ, ಪಾತ್ರಕ್ಕೆ ಪಲ್ಲಂಗ ಅಂದರೆ ಕಾಸ್ಟಿಂಗ್ ಕೌಚ್ ಸಂಸ್ಕೃತಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಚ್ಚು ಎಂದು ಆರೋಪಿಸಿದ್ದಾರೆ. ಕೇವಲ ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ಅಲ್ಲದೇ, ಸುರ್ವೀನ್ ಅವರು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೂಡ ಮಿಂಚಿದ್ದಾರೆ. ಕೆಲಸದ ವಿಚಾರಕ್ಕೆ ಬಂದರೆ, ಸದ್ಯ ಮುಂಬರುವ ನೆಟ್ಫ್ಲಿಕ್ಸ್ ಸರಣಿ ''ಡಿಕೌಪ್ಲ್ಡ್''ನಲ್ಲಿ ನಟ ಮಾಧವನ್ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳಲಿದ್ದಾರೆ ಸುರ್ವೀನ್ ಚಾವ್ಲಾ,