ಸೂರರೈ ಪೊಟ್ರು ಹೊಸ ಸಾಧನೆ; ಜಗತ್ತಿನ ಸಾವಿರ ಚಿತ್ರಗಳ ಪೈಕಿ 3ನೇ ಸ್ಥಾನ

IMG-20210518-WA0034
Published on

ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಚರಿತ್ರೆ ‘ಸಿಂಪ್ಲಿ ಫ್ಲೈ’ ಆಧರಿಸಿ ನಿರ್ವಣವಾದ ತಮಿಳು ಚಿತ್ರ ‘ಸೂರರೈ ಪೊಟ್ರು’ ಹೊಸ ಸಾಧನೆ ಮಾಡಿದೆ. ಇಂಟರ್​ನೆಟ್ ಮೂವಿ ಡೇಟಾಬೇಸ್​ನಲ್ಲಿ (ಐಎಂಡಿಬಿ) ನಡೆಸಲಾದ ಸಮೀಕ್ಷೆಯಲ್ಲಿ ಜಗತ್ತಿನ ಸಾವಿರ ಅತ್ಯುತ್ತಮ ಚಿತ್ರಗಳ ಪೈಕಿ 3ನೇ ಸ್ಥಾನ ಪಡೆದಿದೆ. ಈ ಮೂಲಕ, ಈ ಪಟ್ಟಿಯಲ್ಲಿರುವ ಭಾರತೀಯ ಚಿತ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಸೂರ್ಯ ಅಭಿನಯದ ‘ಸೂರರೈ ಪೊಟ್ರು’ ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಕಳೆದ ವರ್ಷ ಅಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾದ ಸುಧಾ ಕೊಂಗರಾ ನಿರ್ದೇಶನದ ಈ ಚಿತ್ರವು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಅಲ್ಲಿ ಪ್ರಶಸ್ತಿ ಪಡೆಯದಿದ್ದರೂ, ಶಾಂಘೈ ಸೇರಿ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಸಾಕಷ್ಟು ಜನಪ್ರಿಯತೆ ಪಡೆದಿದೆ.

ಇದೀಗ ಈ ಚಿತ್ರಕ್ಕೆ ಐಎಂಡಿಬಿಯಿಂದ ಒಟ್ಟಾರೆ 9.1 ರೇಟಿಂಗ್ ಸಿಕ್ಕಿದೆ. ಈ ಮೂಲಕ ಮೂರನೇ ಸ್ಥಾನಕ್ಕೆ ಚಿತ್ರ ಜಿಗಿದಿದೆ. ಮಿಕ್ಕಂತೆ ಹಾಲಿವುಡ್ ಚಿತ್ರಗಳಾದ ‘ಶಶಾಂಕ್ ರಿಡೆಂಪ್ಶನ್’ ಮತ್ತು ‘ದಿ ಗಾಡ್​ಫಾದರ್’ ಕ್ರಮವಾಗಿ ಮೊದಲ ಮತ್ತು ಎರಡನೆಯ ಸ್ಥಾನದಲ್ಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net