ಗಣೇಶ್​ಗೆ ಸುರಭಿ ಜೋಡಿ

Surabhi 11 Feb 20
Published on

ಬೆಂಗಳೂರು: ‘ಸಿಂಪಲ್’ ಸುನಿ ಮತ್ತು ಗಣೇಶ್ ‘ಚಮಕ್’ ನಂತರ ಮತ್ತೆ ಒಂದಾಗಿದ್ದು, ಇದೀಗ ಇದೇ ಟೀಮ್ಂದ ನಾಯಕಿ ಆಯ್ಕೆ ಕುರಿತ ವಿಚಾರ ಹೊರಬಿದ್ದಿದೆ. ತೆಲುಗು, ತಮಿಳಿನಲ್ಲಿ ಗುರುತಿಸಿಕೊಂಡಿರುವ ನಟಿ ಸುರಭಿ, ಗಣೇಶ್​ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್​ವುಡ್ ಪ್ರವೇಶಿಸಿದ್ದಾರೆ.

ಹಾಗಾದರೆ ಚಿತ್ರದಲ್ಲಿ ಸುರಭಿ ಪಾತ್ರ ಎಂಥದ್ದು? ಅದಕ್ಕೂ ನಿರ್ದೇಶಕ ಸುನಿ ಉತ್ತರಿಸಿದ್ದಾರೆ. ‘ಸುರಭಿ ಈ ಚಿತ್ರದಲ್ಲಿ ಖಾಸಗಿ ವಾಹಿನಿಯ ಆಂಕರ್ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕೋರ್ಟ್​ನಲ್ಲಿ ಮತ್ತು ರಿಯಾಲಿಟಿ ಶೋನಲ್ಲಿ ನಡೆಯುವ ಕಥೆಯಾಗಿದೆ. ಗಣೇಶ್ ಅವರ ಪಾತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುವೆ. ‘ಚಮಕ್’ ಚಿತ್ರದಂತೆ ಈ ಬಾರಿಯೂ ಹೊಸ ಕಥೆಯನ್ನು ಹೇಳುತ್ತೇನೆ’ ಎನ್ನುತ್ತಾರೆ ಸುನಿ. ಸುನಿ ಸದ್ಯ ‘ಅವತಾರ ಪುರುಷ’ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಸದ್ಯದಲ್ಲೆ ಅವೆಲ್ಲವನ್ನು ಮುಗಿಸಿ ಇದೇ 24ರಿಂದ ಚಿತ್ರದ ಶೂಟಿಂಗ್ ಆರಂಭಿಸಲಿದ್ದಾರೆ. ಈ ಚಿತ್ರವನ್ನು ‘ಭರಾಟೆ’ ಚಿತ್ರದ ನಿರ್ಮಾಪಕ ಸುಪ್ರಿತ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಮತ್ತೊಬ್ಬ ನಾಯಕಿಯೂ ಇರಲಿದ್ದು, ಅದ್ಯಾರು ಎಂಬುದನ್ನು ಸದ್ಯದಲ್ಲೆ ಚಿತ್ರತಂಡ ಹೇಳಲಿದೆ.

ಗಣೇಶ್ ಅವರು ಹಿಂದೆ ಕಾಣಿಸಿಕೊಂಡಿರದ ಪಾತ್ರ ಇದು, ಜನ ಖಂಡಿತ ಇಷ್ಟಪಡುವಂತಹ ಸಿನಿಮಾ ಇದಾಗಲಿದೆ. | ಸುನಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net