ಮೆಲೊಡಿ ಡ್ರಾಮಾದಲ್ಲಿ ಸಂಬಂಧಗಳ ರಾಗತಾಳ; ಸಂಗೀತಮಯ ಸಿನಿಮಾ..

Supritha
Published on

ಬೆಂಗಳೂರು: ಕಿರುತೆರೆ ನಟ-ನಟಿಯರು ಸಿನಿಮಾಗಳಲ್ಲಿ ಆಗಾಗ ದರ್ಶನ ಕೊಡುತ್ತಲೇ ಇರುತ್ತಾರೆ. ಕೆಲವು ಧಾರಾವಾಹಿಯಲ್ಲಿ ನಟಿಸಿ, ಹಲವು ಸಿನಿಮಾಗಳಿಗೂ ಬಣ್ಣ ಹಚ್ಚಿರುವ ನಟಿ ಸುಪ್ರಿತಾ ಸತ್ಯನಾರಾಯಣ್, ಇದೀಗ ‘ಮೆಲೊಡಿ ಡ್ರಾಮಾ’ ಹೆಸರಿನ ಮತ್ತೊಂದು ಚಿತ್ರ ಒಪ್ಪಿದ್ದಾರೆ.

ಶೀರ್ಷಿಕೆಗೆ ತಕ್ಕಂತೆ ಇದೊಂದು ಸಂಗೀತಮಯವಾದ ಸಿನಿಮಾ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ಸಹ ನೆರವೇರಿದ್ದು, ಚಿತ್ರೀಕರಣಕ್ಕೂ ತಂಡ ಚಾಲನೆ ನೀಡಿದೆ. ಮಂಜು ಕಾರ್ತಿಕ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರೖೆಮ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ‘ಮೆಲೊಡಿ ಡ್ರಾಮ’ ಚಿತ್ರ ನಿರ್ಮಾಣವಾಗುತ್ತಿದೆ. ನಾಯಕನಾಗಿ ಸತ್ಯ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net