ತಾತ್ಕಾಲಿಕವಾಗಿ 'ತಲೈವರ್ 173' ಎಂದು ಶೀರ್ಷಿಕೆ ಹೊಂದಿರುವ ಈ ಚಿತ್ರವನ್ನು ಆರಂಭದಲ್ಲಿ ಸುಂದರ್.ಸಿ ನಿರ್ದೇಶಿಸಲು ಮುಂದಾಗಿದ್ದರು. ಆದರೆ, ನಂತರ ಅವರು ಪ್ರಾಜೆಕ್ಟ್ನಿಂದ ಹೊರನಡೆದರು. ಆ ನಂತರ ಸಿ.ಬಿ. ಚಕ್ರವರ್ತಿ ಅವರನ್ನು ಆಯ್ಕೆ ಮಾಡಲಾಯಿತು. ಆದರೆ, ಅವರೂ ಸಹ ಮುಂದುವರಿಯಲಿಲ್ಲ. ಆದರೀಗ, ಪ್ರದೀಪ್ ರಂಗನಾಥನ್ ನಟಿಸಿದ ಸೂಪರ್ಹಿಟ್ 'ಡ್ರ್ಯಾಗನ್' ಚಿತ್ರವನ್ನು ನಿರ್ದೇಶಿಸಿದ ಅಶ್ವಥ್ ಮಾರಿಮುತ್ತು, ರಜಿನಿ ಅವರ ಚಿತ್ರವನ್ನು ನಿರ್ದೇಶಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಎಂಬ ವರದಿಗಳಿವೆ.