ಸೂಪರ್​ ಹೀರೋ ಶಿವಣ್ಣ!: ’ಅವನೇ…' ನಿರ್ದೇಶಕನ ಜತೆ ’ಅಶ್ವತ್ಥಾಮ'…

ashwatthama
Published on

ಕನ್ನಡದಲ್ಲಿ ಬಹುತೇಕ ಎಲ್ಲ ಜಾನರ್​ನ ಸಿನಿಮಾಗಳನ್ನೂ ನೋಡಿದ್ದೇವೆ. ಆದರೆ, ಸೂಪರ್​ ಹೀರೋ ಸಿನಿಮಾಗಳು ಕಡಿಮೆಯೇ. ಈಗ ಆ ಬಗೆಯ ಚಿತ್ರವೂ ಪ್ರಾರಂಭವಾಗಿದೆ. ಹೆಸರು "ಅಶ್ವತ್ಥಾಮ'. ಈ ಚಿತ್ರದಲ್ಲಿ ಶಿವರಾಜಕುಮಾರ್​, ಸೂಪರ್​ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. "ಅವನೇ ಶ್ರೀಮನ್ನಾರಾಯಣ' ಖ್ಯಾತಿಯ ಸಚಿನ್​ ರವಿ, ಆಕ್ಷನ್​-ಕಟ್​ ಹೇಳುವುದರ ಜೊತೆಗೆ ಈ ಚಿತ್ರದ ನಿರ್ಮಾಣವನ್ನೂ ಮಾಡುತ್ತಿದ್ದಾರೆ.

"ಅಶ್ವತ್ಥಾಮ'  ಸ್ಪೈ ಥ್ರಿಲ್ಲರ್​ ಚಿತ್ರವಾಗಿದ್ದು, ಇಡೀ ಕಥೆಯಲ್ಲಿ ಶಿವರಾಜಕುಮಾರ್​ ಸೂಪರ್​ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಅವರು ಈ ಚಿತ್ರದಲ್ಲಿ ಮಿಂಚಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸೂಪರ್​ ಹೀರೋ ಸಿನಿಮಾ ಅಂದರೆ ಅಲ್ಲಿ ವಿಎ್​ಎಕ್ಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡಲೇಬೇಕು. ಆ ನಿಟ್ಟಿನಲ್ಲಿ ನಿರ್ದೇಶಕ ಸಚಿನ್​ ರವಿ ಕೂಡ ಹೆಚ್ಚು ಗಮನ ಹರಿಸಿದ್ದಾರೆ. ಇದೇ ಸೆಪ್ಟೆಂಬರ್​ನಲ್ಲಿ ಸಿನಿಮಾ ಸೆಟ್ಟೇರಲಿದ್ದು, ನಾಯಕಿ, ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net