ಹಳೇ ನೆನಪುಗಳನ್ನು ಮತ್ತೆ ಬ(ಅ)ಗೆದ ಸನ್ನಿ ಲಿಯೋನ್​; ಅವರು ಹತ್ತಿ ನಿಂತಿದ್ದಾದರೂ ಎಲ್ಲಿ...?

Sunny Leone
Published on

ನವದೆಹಲಿ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಎಂದರೇನೇ ಒಂದು ಸಂಚಲನ. ಇದೀಗ ಅವರು ಹಳೇ ನೆನಪುಗಳನ್ನು ಅಗೆಯಲು ಹೋಗಿ ಸೋಷಿಯಲ್ ಮೀಡಿಯಾದಲ್ಲಿ ಹಲವರು ಮತ್ತೆ ಹಳೆಯದನ್ನು ನೆನಪು ಮಾಡಿಕೊಳ್ಳುವಂತೆ ಮಾಡಿದ್ದಾರೆ. ಅವರ ಒಂದೇ ಒಂದು ಫೋಟೋ ಈಗ ಹಳೇ ಟ್ರೆಂಡನ್ನು ನೆನಪಿಗೆ ತಂದುಕೊಳ್ಳುವಂತೆ ಮಾಡಿದೆ.

ಇದಕ್ಕೆಲ್ಲ ಕಾರಣ ಸನ್ನಿ ಲಿಯೋನ್ ಮತ್ತೆ ಜೆಸಿಬಿಯನ್ನು ಹತ್ತಿ ನಿಂತಿದ್ದು. ಹೌದು.. ಹಿಂದೊಮ್ಮೆ ಜೆಸಿಬಿಯನ್ನು ಹತ್ತಿ ನಿಂತಿದ್ದ ಅವರು ಇದೀಗ ಮತ್ತೊಮ್ಮೆ ಜೆಸಿಬಿ ಮೇಲೇರಿ ಆ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ, “#JCBkiKhudai is back again?!!” ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಅದನ್ನು ಹಂಚಿಕೊಂಡಿರುವ ಅವರು ಬೇರೆಯವರೂ ತಮ್ಮ ಮನದಾಳವನ್ನು ಬಗೆದು ನೋಡುವಂತೆ ಮಾಡಿದ್ದಾರೆ.

2019ರಲ್ಲೂ ಈ ಹ್ಯಾಷ್​ಟ್ಯಾಗ್ ಟ್ರೆಂಡ್​ ಆಗಿದ್ದು, ತುಂಬಾ ಜನ ಜೆಸಿಬಿ ಜೊತೆ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಾತ್ರವಲ್ಲ ವರನೊಬ್ಬ ವಧು ಜತೆ ತನ್ನದೇ ಜೆಸಿಬಿಯಲ್ಲಿ ದಿಬ್ಬಣ ಬಂದಿದ್ದೂ ಈ ಹಿಂದೆ ವೈರಲ್ ಆಗಿತ್ತು. ಈಗ ಸನ್ನಿ ಲಿಯೋನ್​ ಮತ್ತೊಮ್ಮೆ ಜೆಸಿಬಿ ಏರಿದ್ದು ಕೂಡ ವೈರಲ್​ ಆಗುತ್ತಿದ್ದು, ಹಲವರು #JCBkiKhudai ಹ್ಯಾಷ್​ಟ್ಯಾಗ್​ನೊಂದಿಗೆ ಆ ಫೋಟೋ ಹಂಚಿಕೊಂಡು ಹಳೆಯ ನೆನಪುಗಳನ್ನು ಬಗೆದುಕೊಂಡಿದ್ದಾರೆ. (ಏಜೆನ್ಸೀಸ್​)

ಸನ್ನಿ ಲಿಯೋನ್​ ಹಳೇ ಫೋಟೋ ಹಾಗೂ ಈಗಿನ ಫೋಟೋ ಎರಡನ್ನೂ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್​ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net