PHOTOS| ಹುಟ್ಟುಹಬ್ಬ ಸಂಭ್ರಮದಲ್ಲಿ ಸನ್ನಿ ಲಿಯೋನ್: ಮಾಜಿ ನೀಲಿ ತಾರೆಯ ಕುತೂಹಲಕಾರಿ ಸಂಗತಿಗಳಿವು!
Published on:
Copied
Follow Us
ಮಾಜಿ ನೀಲಿ ತಾರೆ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಿಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಬಗೆಗಿನ ಕುತೂಹಲಕಾರಿ ಸಂಗತಿಗಳನ್ನು ಫೋಟೋ ಸಹಿತ ಈ ಕೆಳಗೆ ಕಾಣಬಹುದಾಗಿದೆ.
1981ರ ಮೇ 13ರಂದು ಜನಿಸಿದ ಸನ್ನಿ ಲಿಯೋನ್ ಮೂಲ ಹೆಸರು ಕರೆಂಜಿತ್ ಕೌರ್ ವೊಹ್ರಾ
ಸನ್ನಿ ಓರ್ವ ಇಂಡೋ-ಕೆನಡಿಯನ್ ಮತ್ತು ಅಮೆರಿಕನ್ ನಟಿ, ಮಹಿಳಾ ಉದ್ಯಮಿಯು ಹೌದು. ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಮಿಂಚು ಹರಿಸಿದ್ದ ಸನ್ನಿ ಮಾಜಿ ನೀಲಿ ತಾರೆಯಾಗಿ ಸಾಕಷ್ಟು ಅವಮಾನಗಳನ್ನು ಅನುಭವಿಸಿದ್ದಾರೆ
ನೀಲಿ ಲೋಕಕ್ಕೆ ಗುಡ್ ಬೈ ಹೇಳಿದ ಸನ್ನಿ ನಂತರ ಬಾಲಿವುಡ್ಗೆ ಕಾಲಿಟ್ಟರು. 2011ರಲ್ಲಿ ಹಿಂದಿ ಬಿಗ್ಬಾಸ್ ಕಾರ್ಯಕ್ರಮಕ್ಕೆ ಪ್ರವೇಶ ನೀಡಿದ ಸನ್ನಿ ಬಿಗ್ ಮನೆಯಲ್ಲಿ 49 ದಿನ ಕಳೆದಿದ್ದರು
ಬಿಗ್ಬಾಸ್ ಮನೆಯಲ್ಲಿದ್ದಾಗಲೇ ಬಾಲಿವುಡ್ ನಿರ್ಮಾಪಕ ಮಹೇಶ್ ಭಟ್, ಅತಿಥಿಯಾಗಿ ಮನೆಗೆ ಭೇಟಿ ನೀಡಿದ್ದ ವೇಳೆ ಜಿಸ್ಮ್ ಚಿತ್ರದ ಮುಂದವರಿದ ಭಾಗ ಜಿಸ್ಮ್-2 ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲು ಸನ್ನಿಗೆ ಆಫರ್ ನೀಡಿದ್ದರು
2012ರ ಆಗಸ್ಟ್ 3ರಂದು ತೆರೆಕಂಡ ಜಿಸ್ಮ್-2 ಚಿತ್ರ ಟೀಕೆಗಳ ನಡುವೆಯೂ ಗಮನಾರ್ಹ ಯಶಸ್ವಿಯಾಯಿತು. ಮೊದಲ ಚಿತ್ರದಲ್ಲಿ ಸನ್ನಿ ಸಖತ್ ಬೋಲ್ಡ್ ಆಗಿ ನಟಿಸಿ, ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದರು
ಜಿಸ್ಮ್ 2 ಚಿತ್ರದ ಬೆನ್ನಲ್ಲೇ ಸನ್ನಿ ಎಕ್ತಾ ಕಪೂರ್ ಅವರ ರಾಗಿಣಿ ಎಂಎಂಎಸ್ ಚಿತ್ರಕ್ಕೆ ಸಹಿ ಹಾಕಿದರು. ಈ ಚಿತ್ರವೂ ಕೂಡ ಸನ್ನಿಗೆ ಮತ್ತಷ್ಟು ಖ್ಯಾತಿಯನ್ನು ತಂದುಕೊಟ್ಟಿತು
ಹಲವು ಐಟಂ ಸಾಂಗ್ಗಳಲ್ಲೂ ಸನ್ನಿ ಸೊಂಟ ಬಳುಕಿಸಿ ಸಿನಿರಸಿಕರ ಮನಗೆದ್ದಿದ್ದಾರೆ. ಕನ್ನಡದಲ್ಲಿಯೂ ಜೋಗಿ ಪ್ರೇಮ್ ಅಭಿನಯದ ಡಿಕೆ ಸಿನಿಮಾದ ಶೇಷಮ್ಮ ಹಾಡಿಗೂ ಮತ್ತು ಇಂದ್ರಜಿತ್ ಲಂಕೇಶ್ ನಿರ್ದೇಶನದ ಲವ್ ಯು ಆಲಿಯಾ ಕಾಮಾಕ್ಷಿ... ಕಾಮಾಕ್ಷಿ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ
ಸದ್ಯ ಸಿನಿಮಾ ಜತೆಗೆ ಸುಖ ದಾಂಪತ್ಯ ಜೀವನ ನಡೆಸುತ್ತಿರುವ ಸನ್ನಿ ಡ್ಯಾನಿಯಲ್ ವೆಬರ್ ವರಿಸಿದ್ದು, ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅಲ್ಲದೇ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಮೆಚ್ಚುಗೆಗೂ ಪಾತ್ರರಾಗಿದ್ದಾರೆ