ತೆರೆ ಮೇಲೆ ಬರಲು ಸಿದ್ಧವಾದ ಭಾರತದ ಮೊದಲ ಮಹಿಳಾ ಸುಮೊ ಚಾಂಪಿಯನ್ ಬಯೋಪಿಕ್. ಇಲ್ಲಿದೆ ವಿವರ!

sumo didi
Published on

ಜನಪ್ರಿಯ ಕ್ರೀಡೆಗಳಾದ ಕ್ರಿಕೆಟ್, ಕುಸ್ತಿ, ಬಾಕ್ಸಿಂಗ್ ಹಾಗೂ ರನ್ನಿಂಗ್ ರೇಸ್ ಸೇರಿ ಹಲವು ಕ್ರೀಡೆಗಳ ಕುರಿತು ಬಾಲಿವುಡ್‌ನಲ್ಲಿ ಸಿನಿಮಾಗಳಾಗಿವೆ. ಹೀಗಿರುವಾಗ, ಜಪಾನ್ ಮೂಲದ ರಾಷ್ಟ್ರೀಯ ಕ್ರೀಡೆ ಸುಮೊ ಕುಸ್ತಿ ಕುರಿತಂತೆ ಹಿಂದಿಯಲ್ಲಿ ಸಿನಿಮಾವಾಗಿರುವುದು ವಿಶೇಷ. ಭಾರತದ ಮೊದಲ ಮಹಿಳಾ ಸುಮೊ ಕುಸ್ತಿ ಚಾಂಪಿಯನ್ ಆಗಿದ್ದ ಹೇತಲ್ ದವೆ ಕುರಿತ ಜೀವನಧಾರಿತ ಸಿನಿಮಾ ಇದಾಗಿದೆ. ‘ಸುಮೊದೀದಿ’ ಎಂಬ ಟೈಟಲ್‌ನಲ್ಲಿ ಈ ಚಿತ್ರಕ್ಕೆ ಜಯಂತ್ ರೋಹಟ್ಗಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಬಾಘಿ-2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರೀಯಂ ಭಗ್ನಾನಿ, ಹೇತಲ್ ದಾವೆಯಾಗಿ ಅಭಿನಯಿಸಿದ್ದು, ಚೈತನ್ಯ ಶರ್ಮಾ, ಅನುಭಾ ಫಾತೇಪುರ, ನಿತೇಶ್ ಪಾಂಡೆ ಕಲಾಬಳಗದಲ್ಲಿದ್ದಾರೆ. 2023ರಲ್ಲಿ ಟೋಕಿಯಾ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಮೂಲಕ ಮೊದಲ ಬಾರಿಗೆ ಪ್ರದರ್ಶನಗೊಂಡಿತ್ತು. ಬಳಿಕ 2024ರ ಪಾಮ್ ಸ್ಪ್ರಿಂಗ್ಸ್ ಹಾಗೂ 24ನೇ ನ್ಯೂಯಾರ್ಕ್ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನಲ್ಲಿ ಸ್ಕ್ರೀನಿಂಗ್ ಆಗಿ ಪ್ರೇಕ್ಷಕರ ಗಮನಸೆಳೆದಿತ್ತು. 2024ರಲ್ಲಿ ಎರಡು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಭಾರತೀಯ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕಿದೆ. ಈ ಮೂಲಕ ದೇಶದಲ್ಲಿ ಅಧಿಕೃತವಾಗಿ ರಿಲೀಸ್ ಆಗುವ ಮುನ್ನವೇ ವಿದೇಶದಲ್ಲಿ ಈ ಸಿನಿಮಾ ಸದ್ದು ಮಾಡಿತ್ತು. ಬಾಲಿವುಡ್ ತಾರೆಯರಾದ ಟೈಗರ್ ಶ್ರಾಫ್​, ಬೋಮನ್ ಇರಾನಿ, ರೆಮೋ ಡಿ’ಸೋಜಾ ಸೇರಿ ಹಲವರು ಈ ಚಿತ್ರವನ್ನು ಬೆಂಬಲಿಸಿದ್ದರು. ದೇಶಾದ್ಯಂತ ಈ ಚಿತ್ರ ಅಧಿಕೃತವಾಗಿ ಬಿಡುಗಡಯಾಗಬೇಕಷ್ಟೇ. -ಏಜೆನ್ಸೀಸ್

ಹೇತಲ್ ದಾವೆ ಯಾರು: ಮುಂಬೈ ಮೂಲದ ಹೇತಲ್ ದವೆ ಭಾರತದ ಮೊದಲ ಮಹಿಳಾ ಸುಮೊ ಕುಸ್ತಿ ಪಟು. ಕೇವಲ ಪುರುಷರಿಗೆ ಸೀಮಿತ ಎಂಬಂತಿದ್ದ ಈ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಇಂತಹ ಹೇತಲ್ ದವೆ, 2008ರಲ್ಲಿ ಸುಮೊಕುಸ್ತಿಯಲ್ಲಿ ಚಾಂಪಿಯನ್‌ಶಿಪ್ ಆಗುವ ಮೂಲಕ ದಾಖಲೆ ಬರೆದಿದ್ದರು. ಇವರ ಜೀವನಧರಿತ ಚಿತ್ರವೇ ‘ಸುಮೊದೀದಿ’.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net