

ಬೆಂಗಳೂರು: ಹೇಮಂತ್ ರಾವ್ ನಿರ್ದೇಶನ ಮಾಡಿದ್ದ ಕವಲುದಾರಿ ಚಿತ್ರ ತಮಿಳಿಗೆ ರಿಮೇಕ್ ಆಗುತ್ತಿದೆ. ಕನ್ನಡದಲ್ಲಿ ಸುಮನ್ರಂಗನಾಥ್ ನಿರ್ವಹಿಸಿದ್ದ ಪಾತ್ರವನ್ನು ಪೂಜಾ ಕುಮಾರ್ ಮಾಡುತ್ತಿದ್ದರು. ಆದರೆ ಈಗ ಅದನ್ನು ಸುಮನ್ ರಂಗನಾಥ್ ಅವರೇ ನಿರ್ವಹಿಸುತ್ತಿದ್ದಾರಂತೆ. ಹೌದು ರಿಷಿ ನಾಯಕನಾಗಿದ್ದ ಕವಲುದಾರಿ ಉತ್ತಮ ಪ್ರಶಂಸೆ ಗಳಿಸಿತ್ತು . ಈ ಚಿತ್ರದಲ್ಲಿ ಸುಮನ್ ಕಾದಂಬರಿ ಎಂಬ ರೋಲ್ನಲ್ಲಿ ನಟಿಸಿದ್ದರು. ಅದೇ ರೋಲ್ನ್ನು ತಮಿಳು ರಿಮೇಕ್ನಲ್ಲಿಯೂ ನಟಿಸಲಿದ್ದಾರೆ. ಹಿರಿಯ ನಟ ಸತ್ಯರಾಜ್ ಅವರ ಪುತ್ರ ಸಿಬಿರಾಜ್ ತಮಿಳು ಚಿತ್ರಕ್ಕೆ ನಾಯಕರಾಗಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದ್ದು, ಸುಮನ್ ರಂಗನಾಥ್ ಅವರು ಸದ್ಯದಲ್ಲೇ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಕವಲುದಾರಿ ಹಿಂದಿಗೂ ರಿಮೇಕ್ ಆಗುತ್ತಿದ್ದು, ಅದನ್ನು ಸ್ವತಃ ಹೇಮಂತ್ಕುಮಾರ್ ಅವರೇ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಪುನೀತ್ರಾಜ್ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.