ಕಾದಂಬರಿ ಆಧಾರಿತ ಚಿತ್ರದಲ್ಲಿ ಸುಲಕ್ಷಾ; ‘ಮರಳಿ ಬಾ ಮನ್ವಂತರವೇ’ ಚಿತ್ರಕ್ಕೆ ಬೀದರ್ ಬೆಡಗಿ ನಾಯಕಿ

sulaksha
Published on

ಬೆಂಗಳೂರು: ‘ಸೇಡು’, ‘ಸ್ನೇಹಿತ’ ಸೇರಿ ಕೆಲವು ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿರುವ ಬೀದರ್ ಮೂಲದ ನಟಿ ಸುಲಕ್ಷಾ ಕೈರಾ. ಸದ್ಯ ಅವರು ಕನ್ನಡದ ‘ಎಬಿ ಪಾಸಿಟಿವ್’ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದು, ಇನ್ನೂ ಮೂರು ಸಿನಿಮಾಗಳಲ್ಲಿ ಬಿಜಿಯಿದ್ದಾರೆ.

ಜತೆಗೆ ಪಂಕಜಾ ವಿಜೇಂದ್ರ ಬರೆದ ‘ಮರಳಿ ಬಾ ಮನ್ವಂತರವೇ’ ಕಾದಂಬರಿ ಆಧರಿಸಿ ಮಾಡುತ್ತಿರುವ ಸಿನಿಮಾಗೆ ಸುಲಕ್ಷ ನಾಯಕಿಯಾಗಿದ್ದಾರೆ. ಈ ಚಿತ್ರಕ್ಕೆ ಅರಕಲಗೋಡು ಜಯಕುಮಾರ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಲಿಂಗತ್ವ ಅಸಮಾನತೆ ಹಾಗೂ ಜಾತಿ ಸೂಕ್ಷ್ಮತೆ ಎಳೆಯನ್ನು ಹೊಂದಿರುವ ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು, ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನೆರವೇರಿದೆ.

ಸುಲಕ್ಷಾ ಜತೆಗೆ ಆರ್ಯನ್ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು ಬೇಬಿ ರೀತು ಸಿಂಗ್, ಪರಿಣೀತಿ, ಯತಿರಾಜ್, ಮೂಗು ಸುರೇಶ್, ಮಯೂರ್, ಅನ್ನಪೂರ್ಣ, ಸಾನಿಯಾ, ಜ್ಯೋತಿಕಾ ಮುಖ್ಯ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಆನೆಂ ವೆಂಕಟರಾವ್​ ಛಾಯಾಗ್ರಹಣ, ಉದಯ ಜಗಳೂರು ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net