ಬಾಲಿವುಡ್​ನ ತಾರಾ ನಟರ ಮಕ್ಕಳು ಲಾಕ್​ಡೌನ್​ ಬೇಸರ ಹೇಗೆ ಕಳೆಯುತ್ತಿರಬಹುದು ಎಂಬ ಕುತೂಹಲವೇ? ಈ ಸ್ಟೋರಿ ನೋಡಿ

suhana khan
Published on

ಮುಂಬೈ: ಕೋವಿಡ್​ 19 ಲಾಕ್​ಡೌನ್​ ದೇಶಾದ್ಯಂತ ಜನರನ್ನು ಅವರವರ ಮನೆಗಳ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಿದೆ. ಹಾಗಾಗಿ ಅವರೆಲ್ಲರೂ ಬಹುತೇಕ ಸಮಯವನ್ನು ಟಿವಿ ನೋಡುತ್ತಲೋ, ತಮ್ಮಿಷ್ಟದ ಅಡುಗೆ ಮಾಡುತ್ತಲೋ, ಹೊಸ ಅಡುಗೆಗಳನ್ನು ಪ್ರಯತ್ನಿಸುತ್ತಲೋ ಕಾಲಕಳೆಯುತ್ತಿದ್ದಾರೆ.

ಅವಕಾಶ ಸಿಕ್ಕಾಗಲೆಲ್ಲ ಮಕ್ಕಳೊಂದಿಗೆ ಆಟವಾಡಿ ಏಕತಾನತೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ವರ್ತನೆಗಳು ಬಾಲಿವುಡ್​ನ ತಾರಾ ನಟರ ಮಕ್ಕಳಲ್ಲೂ ಕಂಡು ಬರುತ್ತಿದೆ. ಇದಕ್ಕೆ ಬಾಲಿವುಡ್​ ಬಾದ್​ಶಾ ಶಾರುಖ್​ ಖಾನ್​ ಅವರ ಪುತ್ರಿ ಸುಹಾನಾ ಖಾನ್​ ಕೂಡ ಹೊರತಲ್ಲ.

ಅಮೆರಿಕದ ನ್ಯೂಯಾರ್ಕ್​ ಯೂನಿವರ್ಸಿಟಿಯ ಫಿಲಂ ಸ್ಕೂಲ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಸುಹಾನಾ ಖಾನ್​ ಸದ್ಯ ಮುಂಬೈನಲ್ಲಿರುವ ತಮ್ಮ ಮನ್ನತ್​ ಬಂಗ್ಲೆಯಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ಇದ್ದೂ ಇದ್ದೂ ಬೇಸರ ಎನಿಸಿದ್ದರಿಂದ ಅಮ್ಮ ಗೌರಿ ಖಾನ್​ ಅವರಿಂದ ಮೇಕ್​ ಅಪ್​ ಮಾಡಿಕೊಳ್ಳುವುದು ಹಾಗೂ ಮನೆಗೆಲಸವನ್ನು ಕಲಿಯುತ್ತಿರುವುದಾಗಿ ಅವರು ಹೇಳಿಕೊಂಡಿದ್ದು ಇತ್ತೀಚೆಗೆ ವೈರಲ್​ ಆಗಿತ್ತು.

ಇದೀಗ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಸಮುದ್ರ ತಟದಲ್ಲಿ ಸೂರ್ಯ ಮುಳುಗುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿರುವ ತಮ್ಮದೇ ಅಸ್ಪಷ್ಟವಾದ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಸಾರ್ವಜನಿಕರ ಅವಗಾಹನೆಗೆ ಮುಕ್ತಗೊಳಿಸಿರುವ ಸುಹಾನಾ ಈಗಾಗಲೆ 6.5 ಲಕ್ಷ ಫಾಲೋಯೆರ್ಸ್​ ಅನ್ನು ಸಂಪಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net