ದಳಪತಿಗೆ ಸುಧಾ ನಿರ್ದೇಶನ?

DALAPATI
Published on

‘ಬಿಗಿಲ್’ ಸಕ್ಸಸ್​ನಲ್ಲಿರುವ ತಮಿಳು ನಟ ವಿಜಯ್, ಸದ್ಯ ಬಹುನಿರೀಕ್ಷಿತ ‘ಮಾಸ್ಟರ್’ ಚಿತ್ರದಲ್ಲಿ ಬಿಜಿ ಆಗಿದ್ದಾರೆ. ಈ ಮಧ್ಯೆ ಅವರು ಮುಂದಿನ ‘ದಳಪತಿ 65’ ಚಿತ್ರದಲ್ಲಿ ನಿರ್ದೇಶಕಿ ಜತೆಗೆ ಕೆಲಸ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ನಿಜವಾದರೆ ನಿರ್ದೇಶಕಿಯೊಬ್ಬರು ಆಕ್ಷನ್-ಕಟ್ ಹೇಳಲಿರುವ ಸಿನಿಮಾದಲ್ಲಿ ವಿಜಯ್ ಮೊದಲ ಬಾರಿಗೆ ಅಭಿನಯಿಸಿದಂತಾಗುತ್ತದೆ.

ಇಲ್ಲಿ ಕೇಳಿಬಂದಿರುವ ಹೆಸರು ಸುಧಾ ಕೊಂಗರಾ. ಈ ಹಿಂದೆ ‘ದ್ರೋಹಿ’, ‘ಇರುಧಿ ಸುತೃ’, ‘ಸೂರರೈ ಪೊಟ್ರು’ ಚಿತ್ರಗಳನ್ನು ನಿರ್ದೇಶಿಸಿದ್ದ ಇವರು, ಕಾಲಿವುಡ್​ನಲ್ಲಿ ಪ್ರತಿಭಾನ್ವಿತ ನಿರ್ದೇಶಕಿ ಎಂಬ ಖ್ಯಾತಿ ಗಳಿಸಿದವರು. ಇದೀಗ ವಿಜಯ್ ಅಭಿನಯದ ‘ದಳಪತಿ 65’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಸುಧಾ ನಿರೂಪಣಾ ಶೈಲಿ ವಿಜಯ್ಗೆ ಇಷ್ಟವಾಗಿದ್ದು, ಈ ಚಿತ್ರ ನಿರ್ದೇಶಿಸಲು ಅವರಿಗೆ ಅವಕಾಶ ಕೊಟ್ಟಿದ್ದಾರಂತೆ.

‘ದಳಪತಿ 65’ ಚಿತ್ರಕ್ಕೆ ಕಥೆ ಹೆಣೆದಿದ್ದು ಕಾಲಿವುಡ್​ನ ಹೆಸರಾಂತ ನಿರ್ದೇಶಕರು. ಎ.ಆರ್.ಮುರುಗದಾಸ್, ಪಂಡಿರಾಜ್, ಪೆರರಸು, ಮಾಗಿಜ್ ತಿರುಮೇನಿ, ಲೋಕೇಶ್ ಕನಗರಾಜ್, ಕಾರ್ತಿಕ್ ತಂಗವೇಲ್ ಸೇರಿ ವಿಜಯ್ಗೆ ಒಪು್ಪವಂತಹ, ಅವರ ಅಭಿಮಾನಿಗಳು ಮೆಚ್ಚುವಂತಹ ಕಥೆ ಮಾಡಿದ್ದಾರೆ. ಸದ್ಯ ಲೋಕೇಶ್ ಕನಗರಾಜ್ ನಿರ್ದೇಶನದ ‘ಮಾಸ್ಟರ್’ ಚಿತ್ರದ ಶೂಟಿಂಗ್​ನಲ್ಲಿ ನಟ ವಿಜಯ್ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net