ನಿರ್ಮಾಪಕ ಎಂ.ಎನ್​. ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ನಟ ಸುದೀಪ್​

Untitled design (39)
Published on

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸ್ಯಾಂಡಲ್​​ವುಡ್​​ ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್​. ಕುಮಾರ್ ನಡುವೆ ನಡೆಯುತ್ತಿದ್ದ ಆರೋಪ-ಪ್ರತ್ಯಾರೋಪಗಳ ಬೆನ್ನಲ್ಲೇ ಇದೀಗ ಸುದೀಪ್​ ಎಸಿಎಮ್ಎಮ್ ಕೋರ್ಟ್​​ಗೆ ಹಾಜರಾಗಿದ್ದು, ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಸಜ್ಜಾಗಿದ್ದಾರೆ.

ಇಂದು ಎಸಿಎಮ್ಎಮ್ ನ್ಯಾಯಾಲಯಕ್ಕೆ ಹಾಜರಾಗಲಿರುವ ನಟ ಕಿಚ್ಚ ಸುದೀಪ್, ನಿರ್ಮಾಪಕ ಎನ್. ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದಾರೆ. ಈಗಾಗಲೇ 10 ದಿನ ಗಡುವು ನೀಡಿದ್ದ ಸುದೀಪ್​, ಕುಮಾರ್​ ಅವರಿಗೆ ಲೀಗಲ್ ನೋಟಿಸ್ ಕೂಡ​​ ನೀಡಿದ್ದರು.

ಬಹಿರಂಗ ಕ್ಷಮಾಯಾಚನೆಗೆ ನೋಟಿಸ್ ನೀಡಿದ್ದ ಸುದೀಪ್ ಅವರಿಗೆ ಕುಮಾರ್ ಉತ್ತರಿಸದ ಕಾರಣ, ಇದೀಗ ನಿರ್ಮಾಪಕನ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net