

ಬೆಂಗಳೂರು: ಈಗಾಗಲೇ ಕನ್ನಡದ ಸಾಕಷ್ಟು ಸ್ಟಾರ್ ನಟರು ಪರಭಾಷೆಗೆ ದಾಗುಂಡಿ ಇಟ್ಟಿದ್ದಾರೆ. ಅದೇ ರೀತಿ ಪರಭಾಷೆಯ ಕಲಾವಿದರು ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆ ಕಾಲಿವುಡ್ನಲ್ಲಿ ತಯಾರಾದ ಮಾನಾಡು ಚಿತ್ರ.
ಇದನ್ನೂ ಓದಿ: ಕೊನೆಗೂ ‘ಆದಿಪುರುಷ್’ ಚಿತ್ರದ ಚಿತ್ರೀಕರಣ ಪ್ರಾರಂಭ
ಹೌದು, ತಮಿಳಿನಲ್ಲಿ ನಿರ್ಮಾಣವಾಗಿರುವ ಮಾನಾಡು ಸಿನಿಮಾ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಲಿದೆ. ಇದೀಗ ಆ ಚಿತ್ರದ ಟೀಸರ್ ಅನ್ನು ಚಿತ್ರತಂಡ ಬುಧವಾರ ಮಧ್ಯಾಹ್ನ 2.34ಕ್ಕೆ ಬಿಡುಗಡೆ ಮಾಡಿಕೊಳ್ಳುತ್ತಿದ್ದು, ಕನ್ನಡದಲ್ಲಿ ಮಾನಾಡು ಟೀಸರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ.
ಅದೇ ರೀತಿ ತೆಲುಗಿನಲ್ಲಿ ರವಿತೇಜ, ಹಿಂದಿಯಲ್ಲಿ ಅನುರಾಗ್ ಕಶ್ಯಪ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರವರ ಸೋಷಿಯಲ್ ಮೀಡಿಯಾಗಳಲ್ಲಿ ಟೀಸರ್ ಲಿಂಕ್ ಶೇರ್ ಮಾಡಲಿದ್ದಾರೆ.
ವೆಂಕಟ್ ಪ್ರಭು ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ. ಸುರೇಶ್ ಕಮತ್ಚಿ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಲುಕ್ ಮೂಲಕವೇ ಸಾಕಷ್ಟು ಮಾಡುತ್ತಿರುವ ಮಾನಾಡು, ಸಿನಿಮಾದಲ್ಲಿ ಸಿಂಬು ಡಿಫರೆಂಟ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.