

ರಾಮ್ಚರಣ್ ತೇಜ ಅಭಿನಯದಲ್ಲಿ ಶಂಕರ್ ಒಂದು ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಗೊತ್ತಿರಬಹುದು. ಈಗಾಗಲೇ ಚಿತ್ರದ ಕೆಲಸಗಳು ಶುರುವಾಗಿದ್ದು, ಜೂನ್ ಅಥವಾ ಜುಲೈ ಹೊತ್ತಿಗೆ ಶಂಕರ್ ಶೂಟಿಂಗ್ಗೆ ಹೊರಡಲಿದ್ದಾರೆ ಮತ್ತು ಮುಂದಿನ ಬೇಸಿಗೆ ರಜಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಈಗ ಈ ಚಿತ್ರದಿಂದ ಸ್ಪೆಷಲ್ ಸುದ್ದಿಯೊಂದು ಬಂದಿದೆ.
ಏನೆಂದರೆ, ಚಿತ್ರದ ಒಂದು ಸನ್ನಿವೇಶವೊಂದರಲ್ಲಿ ನಾಲ್ಕು ಭಾಷೆಗಳ, ನಾಲ್ವರು ಸ್ಟಾರ್ ನಟರು ನಟಿಸುವ ಸಾಧ್ಯತೆ ಇದೆಯಂತೆ. ಈ ನಿಟ್ಟಿನಲ್ಲಿ ಕನ್ನಡದಿಂದ ಸುದೀಪ್, ಹಿಂದಿಯಿಂದ ಸಲ್ಮಾನ್ ಖಾನ್, ತೆಲುಗಿನಿಂದ ಚಿರಂಜೀವಿ ಅಥವಾ ಪವನ್ ಕಲ್ಯಾಣ್ ಮತ್ತು ತಮಿಳಿನಿಂದ ವಿಜಯ್ ಸೇತುಪತಿ ಅವರನ್ನು ಸಂರ್ಪಸಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಎಲ್ಲ ನಟರ ಜತೆಗೆ ಒಂದು ಸುತ್ತು ಮಾತಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡದವರಾಗಲೀ ಅಥವಾ ಯಾವ ಸ್ಟಾರ್ ನಟರಾಗಲೀ, ಈ ವಿಷಯವನ್ನು ಖಚಿತಪಡಿಸಿಲ್ಲ. ಬಹುಶಃ ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ಇನ್ನೂ ಸಾಕಷ್ಟು ಸಮಯವಿರುವುದರಿಂದ ಚಿತ್ರತಂಡದವರು ಇನ್ನೂ ತಡವಾಗಿ ಬಹಿರಂಗಗೊಳಿಸುವ ಸಾಧ್ಯತೆ ಇದೆ. ಈ ಪ್ಯಾನ್ ಇಂಡಿಯಾ ಚಿತ್ರವನ್ನು ದಿಲ್ ರಾಜು ನಿರ್ವಿುಸುತ್ತಿದ್ದು, ರಾಮ್ಚರಣ್ ತೇಜಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.