ಹೊಸಬರ ಬೆನ್ನಿಗೆ ನಿಂತ ಸುದೀಪ್; ‘ಡಿಯರ್ ಕಣ್ಮಣಿ’, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’

Sudeep
Published on

ಬೆಂಗಳೂರು: ಸ್ಟಾರ್​ನಟರು ಹೊಸಬರ ತಂಡವನ್ನು ಪ್ರೋತ್ಸಾಹಿಸುವುದು ಹೊಸ ವಿಷಯವೇನಲ್ಲ. ಅದರಲ್ಲೂ ಸುದೀಪ್ ಸಾಕಷ್ಟು ಹೊಸಬರನ್ನು ತಮ್ಮದೇ ರೀತಿಯಲ್ಲಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಈಗ ಅವರು ‘ಡಿಯರ್ ಕಣ್ಮಣಿ’ ಮತ್ತು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡಗಳ ಬೆನ್ನಿಗೆ ನಿಂತಿದ್ದಾರೆ.

ವಿಸ್ಮಯಾ ಗೌಡ ನಿರ್ದೇಶನ ಮತ್ತು ನಿರ್ವಣದಲ್ಲಿ ಮೂಡಿಬರಲಿರುವ ‘ಡಿಯರ್ ಕಣ್ಮಣಿ’ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಜತೆಗೆ ಶೀರ್ಷಿಕೆ ಪೋಸ್ಟರ್ ಸಹ ಸುದೀಪ್ ಬಿಡುಗಡೆ ಮಾಡಿದ್ದಾರೆ. ‘ಬಿಗ್​ಬಾಸ್’ ಖ್ಯಾತಿಯ ಕಿಶನ್ ಬೆಳಗಲಿ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿರುವ ‘ಡಿಯರ್ ಕಣ್ಮಣಿ’ ಚಿತ್ರದಲ್ಲಿ ಅವರಿಗೆ ಸಾತ್ವಿಕಾ (ಶ್ರಾವ್ಯಾ) ಜೋಡಿಯಾಗಿದ್ದಾರೆ. ಕ್ರಿಕೆಟಿಗ ಪ್ರವೀಣ್ ಸಹ ಮತ್ತೋರ್ವ ನಾಯಕನಾಗಿದ್ದಾರೆ. ಈ ಚಿತ್ರಕ್ಕೆ ವಿಸ್ಮಯಾ ಗೌಡ ಮತ್ತು ರಾಜು ವೈವಿಧ್ಯ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ.

ಹಾಸ್ಟೆಲ್ ಹುಡುಗರು ಟೀಸರ್ ಬಿಡುಗಡೆ: ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಪ್ರಮೋಷನಲ್ ಟೀಸರ್​ನ್ನು ಸುದೀಪ್ ಬಿಡುಗಡೆ ಮಾಡಿ, ಹೊಸ ತಂಡದ ಕ್ರಿಯೆಟಿವಿಟಿಗೆ ಮರುಳಾಗಿದ್ದಾರೆ. ‘ಸಿನಿಮಾ ಚೆನ್ನಾಗಿ ಬರಬೇಕೆಂದರೆ ಮೊದಲು ಬೇಕಿರುವುದು ದುಡ್ಡಲ್ಲ, ಐಡಿಯಾ. ಇಂಥ ಹುಡುಗರನ್ನು ಬೆಳೆಸಿದರೆ, ಮತ್ತಷ್ಟು ಹೊಸ ರೀತಿಯ ಸಿನಿಮಾಗಳನ್ನು ನೀಡುತ್ತಾರೆ’ ಎಂದು ಶುಭ ಕೋರಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಪ್ರಜ್ವಲ್, ವರುಣ್ ಕುಮಾರ್, ಅರವಿಂದ್, ನಿತಿನ್ ಈ ಚಿತ್ರದ ನಿರ್ಮಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net