ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಜತೆ ಮೋಸದ ಆಟವಾಡಿದ್ರಾ ಕಿಚ್ಚ ಸುದೀಪ್?; ಸ್ಕ್ರೀನ್ ಶಾಟ್ ಏನು ಹೇಳುತ್ತೆ?

E3wGuO0UUAQxSnR
Published on

ನವದೆಹಲಿ: 5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಕರೊನಾ ಪರಿಹಾರ ನಿಧಿ ಸಂಗ್ರಹಕ್ಕಾಗಿ ವಿವಿಧ ಸೆಲೆಬ್ರಿಟಿಗಳ ವಿರುದ್ಧ ಆಡಿದ ಚೆಸ್ ಪಂದ್ಯದ ವೇಳೆ ಯುವ ಬಿಲಿಯಾದೀಶ ಉದ್ಯಮಿ ನಿಖಿಲ್ ಕಾಮತ್ ಮೋಸದ ಆಟವಾಡಿ ಕ್ಷಮೆ ಕೇಳಿದ್ದರು. ಇದೀಗ ನಿಖಿಲ್ ಬಳಿಕ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಸಹ ಮೋಸದ ಆಟವಾಡಿರುವ ಬಗ್ಗೆ ಕೋಚ್ ಶ್ರೀನಾಥ್ ನಾರಾಯಣನ್ ಕೆಲವೊಂದಿಷ್ಟು ಸ್ಟ್ರೀನ್​ ಶಾಟ್​ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಚ್ಚರಿ ಏನೆಂದರೆ ಒಟ್ಟು 10 ಪಂದ್ಯಗಳ ಪೈಕಿ 1 ಪಂದ್ಯವನ್ನು ಹೊರತುಪಡಿಸಿ ಎಲ್ಲವನ್ನೂ ವಿಶ್ವನಾಥನ್ ಆನಂದ್ ಜಯಿಸಿದ್ದರು. ದಿಗ್ಗಜ ಆನಂದ್‌ರನ್ನೇ ಹವ್ಯಾಸಿ ಆಟಗಾರ ಸೋಲಿಸಿದ ಬಗ್ಗೆ ಅಚ್ಚರಿ, ಮೋಸ ಮಾಡಿ ಗೆದ್ದಿರುವ ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ನಿಖಿಲ್ ಕಾಮತ್, ಕಂಪ್ಯೂಟರ್ ಮತ್ತು ಇತರ ನೆರವಿನ ಮೂಲಕ ಆನಂದ್‌ರನ್ನು ಮಣಿಸಿದ್ದನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.

ಇದೀಗ ಕೋಚ್ ಶ್ರೀನಾಥ್ ನಾರಾಯಣನ್, ಸುದೀಪ್ ಮತ್ತು ಸಾಜಿದ್ ಅವರ ಆಟವನ್ನು ಎಲ್ಲರೂ ಅನುಮಾನಿಸಿದ್ದಾರೆ. ಹಾಗಂತ ನಾನಿಲ್ಲಿ ನ್ಯಾಯಾಧೀಶನಲ್ಲ. ತೀರ್ಪುಗಾರನೂ ಅನ್ನು ಅಲ್ಲ. ಆಟದ ಸತ್ಯ ಬಯಲಾಗಿದೆ. ಸತ್ಯವು ಸ್ಪಷ್ಟವಾಗಿದೆ ಎಂದು ಬರೆದುಕೊಂಡು, ಸುದೀಪ್ ಮತ್ತು ನಾಡಿಯಾದ್ವಾಲಾ ಅವರ ಚೆಸ್​ಮೇಟ್​ನಲ್ಲಿನ ಖಾತೆಯನ್ನು ರದ್ದು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net