ಹಸಿದವರ ಹೊಟ್ಟೆ ತುಂಬಿಸಿದ ಸುದೀಪ್ ಚಾರಿಟಬಲ್ ಸೊಸೈಟಿ

Sudeep 1
Published on

ಕರೊನಾ ವೈರಸ್‌ನಿಂದಾಗಿ ಬಡಜನರು ಊಟ ಇಲ್ಲದೆ ಪರದಾಡುತ್ತಿರುವಾಗ, ಅವರ ನೆರವಿಗೆ ಡಿಬಾಸ್ ಅಭಿಮಾನಿಗಳು ಬಂದಿದ್ದು ಗೊತ್ತೇ ಇದೆ. ಈಗ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಸಹ ತಮ್ಮ ಕೈಲಾದ ಸಹಾಯ ಮಾಡುವತ್ತ ಹೆಜ್ಜೆ ಇಟ್ಟಿದ್ದು, ಬೆಂಗಳೂರಿನ ಅನೇಕ ಕಡೆಗಳಲ್ಲಿ ಹಸಿದವರಿಗೆ ಹೊಟ್ಟೆ ತುಂಬಿಸಿದ್ದಾರೆ.

ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಯಿಂದ ಸುದೀಪ್ ಅಭಿಮಾನಿಗಳು ಬ್ಯಾಟರಾಯನಪುರ, ಜೆಜೆ ನಗರ ಸೇರಿದಂತೆ ಹಲವು ಕಡೆ ಹಸಿದವರಿಗೆ ಆಹಾರವನ್ನು ವಿತರಿಸಲಾಗುತ್ತಿದೆ. ಶುಚಿತ್ವವನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ಪ್ಯಾಕ್ ಮಾಡಿ, ಅಗತ್ಯವಿರುವವರಿಗೆ ಹಂಚಲಾಗುತ್ತಿದೆ. ಹೀಗೆ ನೂರಾರು ಜನ ಬಡಜನರು ಹೊಟ್ಟೆ ತುಂಬಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ವತಿಯಿಂದ ಮೈಸೂರಿನಲ್ಲಿ ಹಸಿದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈಗ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಯು ಬೆಂಗಳೂರಿನಲ್ಲಿ ಹಸಿದವರಿಗೆ ಆಹಾರವನ್ನು ವಿತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕೆಲಸ ಬೇರೆ ಊರುಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net