'ನಿಮಗ್ಯಾರಿಗೂ ಮೀಟರ್​ ಇಲ್ವಾ?'; ಪೆದ್ದು ಪೆದ್ದಾಗಿ ಟಾಸ್ಕ್​ ಅರ್ಥ ಮಾಡ್ಕೊಂಡ ಬಿಗ್​ಬಾಸ್ ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್..BBK13

 'ನಿಮಗ್ಯಾರಿಗೂ ಮೀಟರ್​ ಇಲ್ವಾ?'; ಪೆದ್ದು ಪೆದ್ದಾಗಿ ಟಾಸ್ಕ್​ ಅರ್ಥ ಮಾಡ್ಕೊಂಡ ಬಿಗ್​ಬಾಸ್ ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್..BBK13
Published on: 
  • ಆಟ ಅರ್ಥಮಾಡಿಕೊಳ್ಳದ ಬಿಗ್​ಬಾಸ್ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್​ ಕ್ಲಾಸ್​​.

  • ರೂಲ್ಸ್​ ಬ್ರೇಕ್​ ಮಾಡಿದ್ರು ಕ್ಯಾಪ್ಟನ್ಸಿ ರೇಸ್​ನಿಂದ ಕ್ಯಾವ್ಯಾ-ಗಾನವಿಯನ್ನು ಹೊರಗಿಡದ ಬಗ್ಗೆ ಕಿಡಿ.

  • ನಿಮಗೆ ಮೀಟರ್ ಇಲ್ವಾ, ಇಡೀ ಮನೆಯಲ್ಲಿರುವವರು ದಡ್ಡರು ಎಂದ ಕಿಚ್ಚ ಸುದೀಪ್.

Biggboss Kannada 13: ಮಹಾನ್​ ಕವಿ ಮಂಜ ಬಿಗ್​ಬಾಸ್​ ಮನೆಯಿಂದ ಹೊರ ಬಂದ ನಂತರ ..ಕೊಂಚ ಶಬ್ಧ ಮಾಲಿನ್ಯ ಕಡಿಮೆಯಾಗಿದೆ ಎನ್ನುವುದು ವೀಕ್ಷಕರ ಅಭಿಪ್ರಾಯ. ಆದರೆ, ಸೀಸನ್ 13ರ ಸ್ಪರ್ಧಿಗಳಿಗೆ ಟಾಸ್ಕ್​ ಆಡುವ ಹುಮ್ಮಸ್ಸೇ ಇಲ್ಲ. ಪೆದ್ದು ಪೆದ್ದುಗಳಾಗಿ ಟಾಸ್ಕ್ ಅರ್ಥ ಮಾಡಿಕೊಂಡು, ನಿಯಮ ಪಾಲನೆ ಮಾಡದೆ, ತಪ್ಪಾಗಿ ನಿರ್ಧಾರ ತೆಗೆದುಕೊಂಡು ಪ್ರತಿ ಬಾರಿ ಚಟುವಟಿಕೆ​ ರದ್ದಾಗುವಂತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ವೀಕ್ಷಕರು ವ್ಯಂಗ್ಯವಾಡುತ್ತಿದ್ದಾರೆ. ಸದ್ಯ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿಯೂ ಈ ವಿಚಾರವಾಗಿ ಸುದೀಪ್​ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಿಚ್ಚ ಸುದೀಪ್​ ಏನಂದ್ರು?

ಕಳೆದ ವಾರ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಪಜಲ್​ ಜೋಡಿಸುವ ಟಾಸ್ಕ್​ಗೆ ಗಾನವಿ ಮತ್ತು ಕಾವ್ಯಾರನ್ನು ಉಸ್ತುವಾರಿ ಮಾಡಲಾಗಿತ್ತು. ಇಲ್ಲಿ ಸಮಯದ ಅಭಾವದಿಂದಾಗಿ ಟಾಸ್ಕ್​ ಬೇಗನೆ ಮುಗಿಸುವ ಭರದಲ್ಲಿ ಉಸ್ತುವಾರಿಗಳು ತಪ್ಪು ತಪ್ಪಾಗಿ ನಿರ್ಧಾರ ಕೈಗೊಂಡಿದ್ದರು. ಮಧ್ಯ ಪ್ರವೇಶಿಸಿದ ಬಿಗ್​ಬಾಸ್ ಟಾಸ್ಕ್​ ರದ್ದು ಮಾಡಿದ್ದರು. ಈ ಇಬ್ಬರನ್ನು ಕ್ಯಾಪ್ಟನ್ಸಿ ರೇಸ್​ನಿಂದ ಹೊರಗಿಡುವ ಬದಲಾಗಿ, ಪ್ರಶಾಂತ್​ ಆಸಿಯಾ ಹಾಗೂ ಸೌಂದರ್ಯ, ಕಿರಣ್​ ಶಾಸ್ತ್ರಿಯನ್ನು ಹೊರಗಿಟ್ಟಿದ್ದರು.

ಯಾವುದೇ ವಿಚಾರವನ್ನು ಪ್ರಶ್ನಿಸದ ಮನೆ ಮಂದಿಯ ಗುಣ, ಫೇವರಿಸಂ, ಜೊತೆಗೆ ಗಾನವಿಯ ಮೋಸದಾಟ, ಗಗನ್​-ತಾಂಡವ್​​, ನಿಯಮ ಮುರಿದ ಪ್ರಶಾಂತ್​ಗೂ ಕ್ಲಾಸ್ ತೆಗೆದುಕೊಂಡಿರುವುದು ಪ್ರೋಮೋದಲ್ಲಿದೆ.

ಕಿಚ್ಚನ ಕ್ಲಾಸ್ ಹೀಗಿರಲಿದೆ

ಎರಡು ಪ್ರೋಮೋ ರಿಲೀಸ್​ ಆಗಿದ್ದು, ಮೊದಲನೆಯ ವಿಡಿಯೋದಲ್ಲಿ ಸಮಯ ಎರಡು ತರ ಬಳಕೆಯಾಗುತ್ತದೆ. ಒಂದು ಸಮಯ ಸಾಧಕರು, ಮತ್ತೊಬ್ಬರು ಸಮಯ ಪಡೆದು ಸಾಧಿಸುವವರು. ಅಧಿಕಾರ ಪಡೆದುಕೊಳ್ಳೋದಕ್ಕೆ ಏನು ಮಾಡುತ್ತಾರೆ. ಪಡೆದುಕೊಂಡವರು ಅಧಿಕಾರ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದು ವ್ಯಕ್ತಿತ್ವದ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎಂದಿದ್ದಾರೆ ಸುದೀಪ್​.

ಒಂಟಿ ಪಂಟರ್​ ತಂಡಕ್ಕೆ ಟಾಸ್ಕ್​ನಿಂದ 30 ಕಾಯ್ನ್​ ಸಿಕ್ಕಿತ್ತು. ಈ ವಿಚಾರಕ್ಕೆ ತಂಡದಲ್ಲಿ ಭಿನ್ನಾಭಿಪ್ರಾಯ ಎದ್ದಿತ್ತು. ಕೊನೆಗೆ ಎಲ್ಲರಿಗೂ ಸಮನಾಗಿ ಎಂಟು ಕಾಯ್ನ್ ಹಂಚುವುದು ಎನ್ನುವ​ ನಿರ್ಧಾರಕ್ಕೆ ಬಂದ ನಂತರ ಎಲ್ಲರು ಗಾನವಿಯನ್ನು ನಂಬಿ ಕನ್ಫೆಷನ್​ ರೂಂಗೆ ಕಳುಹಿಸಿದರು. ಆದರೆ, ಅಲ್ಲಿ ಗಾನವಿ ತಮ್ಮ ಆಟವನ್ನೇ ಬದಲಾಯಿಸಿದರು. ಗಾನವಿ ಮೂವತ್ತರಲ್ಲಿ 15 ಕಾಯ್ನ್​ ತೆಗೆದುಕೊಂಡರೆ, ಲಕ್ಷ್ಮಿ 8 ತೆಗೆದುಕೊಳ್ಳುತ್ತಾರೆ. ಗಗನ್ 6, ಸೋನಿಕಾ 1 ಹಾಗೂ ಧನುಷ್​ಗೆ ಯಾವುದೇ ಕಾಯ್ನ್​ ಸಿಗಲಿಲ್ಲ. ಗಾನವಿಗೆ ಕೊಟ್ಟ ಅಧಿಕಾರ ದುರುಪಯೋಗ ಪಡಿಸಿಕೊಂಡ ವಿಚಾರದ ಬಗ್ಗೆ ಕ್ಲಾಸ್​ ತೆಗೆದುಕೊಳ್ತಾರಾ? ಎನ್ನುವುದನ್ನು ಪೂರ್ಣ ಎಪಿಸೋಡ್​ನಲ್ಲಿ ನೋಡಬೇಕಾಗಿದೆ

ಮತ್ತೊಂದು ಪ್ರೋಮೋದಲ್ಲಿ ಏನಿದೆ?

ಪಜಲ್​ ಟಾಸ್ಕ್​ನಲ್ಲಿ ನಿಯಮ ಮುರಿದ ಕಾರಣ, ಪದೇ ಪದೇ ತಮ್ಮಿಷ್ಟಕ್ಕೆ ನಿಯಮ ಬದಲಾಯಿಸಿದ ಕಾರಣಕ್ಕೆ ಆಟ ರದ್ದಾಗುತ್ತದೆ. ಇದಕ್ಕಾಗಿ ಇಬ್ಬರನ್ನು ಟಾಸ್ಕ್​ನಿಂದ ಇಬ್ಬರನ್ನು ಹೊರಗಿಡಿ ಎನ್ನುತ್ತಾರೆ. ನೀವೆಲ್ಲ ಯಾರನ್ನ ಹೊರಗಿಟ್ರಿ. ಒಂದು ಸೀಸನ್​ನಲ್ಲಿ ಒಬ್ಬರು ಅಥವಾ ಇಬ್ಬರು ದಡ್ಡರಿರುತ್ತಾರೆ. ಈ ಸೀಸನ್​ನಲ್ಲಿ ಇಡೀ ಸ್ಪರ್ಧಿಗಳು ದಡ್ಡರಿದ್ದೀರಿ. ನಿಮ್ಗ್ಯಾರಿಗೂ ಮೀಟರ್​ ಇಲ್ವಾ ಎಂದರು ಸುದೀಪ್​.

ಆಸಿಯಾ, ಗಗನ್, ಪ್ರಶಾಂತ್​​​ಗೆ ಸಪೋರ್ಟ್?

ಸದ್ಯ ಪ್ರೇಕ್ಷಕರ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆ ಎಂದರೆ ಅದು ಆಸಿಯಾ, ಗಗನ್, ಪ್ರಶಾಂತ್​​​ಗೆ ಬಿಗ್​ಬಾಸ್​ ತಂಡ ಸಪೋರ್ಟ್ ಮಾಡ್ತಿದೆ. ಫೇವರಿಸಂ ಮಾಡುತ್ತಿದೆ ಎಂದು. ಮೂವರನ್ನು ಗೆಲ್ಲಿಸಲು ಅವರನ್ನೇ ಫೋಕಸ್​ ಮಾಡಿ, ಅವರ ವಿರುದ್ಧ ಯಾವುದೇ ತಪ್ಪು ಆರೋಪ ಕೇಳಿ ಬರದಂತೆ ನೋಡಿಕೊಳ್ಳುತ್ತಿದೆ ಎನ್ನುವ ಚರ್ಚೆಗಳಾಗುತ್ತಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net