ವಿರಾಟ್​ ಕೊಹ್ಲಿ ಬಗ್ಗೆ ಈ ಹಿಂದೆ ಆಡಿದ್ದ ಮಾತನ್ನು ನೆನಪು ಮಾಡಿದ್ದಕ್ಕೆ ಗರಂ ಆದ ಮೃನಾಲ್​ ಠಾಕೂರ್​!

Mrunal Thakur
Published on

ಮುಂಬೈ: ನನಗೆ ವಿರಾಟ್​ ಕೊಹ್ಲಿ ಎಂದರೆ ಹುಚ್ಚು ಪ್ರೀತಿ ಎಂದು ನಟಿ ಮೃನಾಲ್​ ಠಾಕೂರ್​ ಈ ಹಿಂದೆ ನೀಡಿದ್ದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್​ ಆಗುತ್ತಿದೆ. ಆದರೆ, ಇದನ್ನು ಗಮನಿಸಿರುವ ಮೃನಾಲ್​, ಮಾಧ್ಯಮದ ಮೇಲೆ ಸಿಡಿಮಿಡಿಗೊಂಡಿದ್ದಾರೆ.

ಬಾಲಿವುಡ್​ನ ಆನ್‌ಲೈನ್ ನೆಟ್‌ವರ್ಕ್ ಆಗಿರುವ "ಇನ್‌ಸ್ಟಂಟ್ ಬಾಲಿವುಡ್‌" ಇನ್​​ಸ್ಟಾಗ್ರಾಂ ಪೇಜ್​ನಲ್ಲಿ ಮೃನಾಲ್​ ಅವರ ಹಳೆಯ ಸಂದರ್ಶನವನ್ನು ಮತ್ತೆ ಹಂಚಿಕೊಳ್ಳಲಾಗಿದೆ. ಆದರೆ, ಇದು ಮೃನಾಲ್​ಗೆ ಸ್ವಲ್ಪವೂ ಇಷ್ಟವಾಗಿಲ್ಲ. ಹೀಗಾಗಿ ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಈ ಹಿಂದೆ "ಜೆರ್ಸಿ" ಸಿನಿಮಾದ ಪ್ರಚಾರದ ಸಂದರ್ಭದಲ್ಲಿ, ಮೃನಾಲ್ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಜರ್ಸಿ ಸಿನಿಮಾ ಕ್ರಿಕೆಟ್​ಗೆ ಸಂಬಂಧಪಟ್ಟಿದ್ದರಿಂದ ಕ್ರಿಕೆಟ್​ ಬಗ್ಗೆ ಪ್ರಶ್ನಿಸಲಾಗಿತ್ತು. ಈ ವೇಳೆ ಮೃನಾಲ್​ ಅವರು ಒಂದು ಸಮಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ಹುಚ್ಚಳಂತೆ ಪ್ರೀತಿ ಮಾಡುತ್ತಿದ್ದೆ ಎಂದಿದ್ದರು.

ನನ್ನ ಸಹೋದರ ಕ್ರಿಕೆಟ್​ನ ದೊಡ್ಡ ಅಭಿಮಾನಿ ಆಗಿರುವುದರಿಂದ ನಾನು ಕೂಡ ಕ್ರಿಕೆಟ್ ಅನ್ನು ಇಷ್ಟಪಡಲು ಪ್ರಾರಂಭಿಸಿದೆ. ಸುಮಾರು ಐದು ವರ್ಷಗಳ ಹಿಂದೆ ಸಹೋದರನ ಜತೆ ಕ್ರೀಡಾಂಗಣದಲ್ಲಿ ನೇರವಾಗಿ ಪಂದ್ಯವನ್ನು ವೀಕ್ಷಿಸಿದ ನೆನಪುಗಳು ನನ್ನಲ್ಲಿವೆ. ನಾನು ನೀಲಿ ಜೆರ್ಸಿ ಧರಿಸಿ ಟೀಮ್ ಇಂಡಿಯಾವನ್ನು ಹುರಿದುಂಬಿಸಿದ್ದೆ. ಆದರೆ, ಇಂದು ನಾನು ಜರ್ಸಿಯಂತಹ ಕ್ರಿಕೆಟ್ ಆಧಾರಿತ ಚಲನಚಿತ್ರದ ಭಾಗವಾಗಿದ್ದೇನೆ. ಇದೊಂದು ರೀತಿಯಲ್ಲಿ ಸಂತೋಷದ ಕಾಕತಾಳೀಯವಾಗಿದೆ ಎಂದು ಠಾಕೂರ್ ಹಿಂದಿನ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲದೆ, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್​ ಕೊಹ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗರು ಎಂದಿದ್ದರು.

Mrunal 1

ಇದೀಗ ಇನ್‌ಸ್ಟಂಟ್ ಬಾಲಿವುಡ್‌ ಮಾಧ್ಯಮ ಸಂದರ್ಶನವನ್ನು ಮರು ಹಂಚಿಕೆ ಮಾಡಿರುವುದರಿಂದ ಮೃನಾಲ್​ ಅಸಮಾಧಾನಗೊಂಡಿದ್ದು, ಇದನ್ನು ಇಲ್ಲಿಗೆ ನಿಲ್ಲಿಸಿ ಎಂದಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಮೃನಾಲ್ ಅವರು ವಿಜಯ್ ರಾಜ್ ಮತ್ತು ಹುಮಾ ಖುರೇಷಿ ಅವರೊಂದಿಗೆ ಪೂಜಾ ಮೇರಿ ಜಾನ್, ಚಿರಂಜೀವಿ ಮತ್ತು ತ್ರಿಶಾ ಕೃಷ್ಣನ್ ಜತೆ ವಿಶ್ವಂಬರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಹೈ ಜವಾನಿ ತೋ ಇಷ್ಕ್ ಹೋನಾ ಹೈ ಮತ್ತು ಸನ್ ಆಫ್ ಸರ್ದಾರ್ 2 ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ.

ಕೊನೆಯದಾಗಿ ತೆಲುಗಿನ ರೋಮ್ಯಾಂಟಿಕ್ ಚಿತ್ರ "ದಿ ಫ್ಯಾಮಿಲಿ ಸ್ಟಾರ್"ನಲ್ಲಿ ನಟಿಸಿದ್ದರು. ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿರುವ ಈ ಸಿನಿಮಾವನ್ನು ಪರಶುರಾಮ್ ನಿರ್ದೇಶಿಸಿದರು. ಇದಲ್ಲದೆ, ಇತ್ತೀಚೆಗೆ ಬಿಡುಗಡೆಯಾದ ಕಲ್ಕಿ ಸಿನಿಮಾದಲ್ಲೂ ಅತಿಥಿ ಪಾತ್ರದಲ್ಲಿ ಮೃನಾಲ್​ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net