ವಸಿಷ್ಠಗೆ ಲವ್...ಲಿ ಸ್ಟೆಫಿ ನಾಯಕಿ; ಜಾರ್ಖಂಡ್​ನಿಂದ ಕನ್ನಡಕ್ಕೆ ಬಂದ ಚೆಲುವೆ

Love Ly
Published on

ಬೆಂಗಳೂರು: ವಸಿಷ್ಠ ಸಿಂಹ ಈಗ ಕೇವಲ ಖಳನಟನ ಪಾತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಗಾಯಕನಾಗಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರು ನಾಯಕನಾಗಿರುವ ಹೊಸ ಚಿತ್ರ ‘ಲವ್...ಲಿ’. ನಾಯಕಿಯ ಆಯ್ಕೆಯಾಗದೇ ಚಿತ್ರೀಕರಣ ಪ್ರಾರಂಭಿಸಿದ್ದ ಚಿತ್ರತಂಡ ಈಗಾಗಲೇ ಒಂದು ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ. ಈಗ ನಾಯಕಿಯ ಆಯ್ಕೆಯಾಗಿದ್ದು, ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ‘ಲವ್...ಲಿ’ ಚಿತ್ರದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿದ್ದಾರೆ.

2016ರಲ್ಲಿ ಮಿಸ್ ಟೀನ್ ಇಂಡಿಯಾ, 2018ರಲ್ಲಿ ಮಿಸ್ ಜಾರ್ಖಂಡ್ ಆಗಿದ್ದ ಸ್ಟೆಫಿ, ಮಿಸ್ ಇಂಡಿಯಾ ಟಾಪ್ 5ರಲ್ಲಿ ಆಯ್ಕೆಯಾಗಿದ್ದರು. ಬಳಿಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು ‘ಅಮಿತ್ ಭದಾನಾ ಎಲ್​ಎಲ್​ಬಿ’ ಎಂಬ ವೆಬ್​ಸರಣಿ, ‘ರೋಯೇಗಾ’ ಎಂಬ ಹಿಂದಿ ಆಲ್ಬಮ್ ಸಾಂಗ್ ಸೇರಿದಂತೆ ಹಿಂದಿ, ಕೊರಿಯನ್, ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ಅವರಿಗೆ ‘ಲವ್...ಲಿ’ ಮೊದಲ ಕನ್ನಡ ಚಿತ್ರವಾಗಿದ್ದು, ಈಗಾಗಲೇ ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಇದೇ ಗುರುವಾರ ನಾಯಕ ವಸಿಷ್ಠ ಹಾಗೂ ನಾಯಕಿ ಸ್ಟೆಫಿ ಜೋಡಿಯಿರುವ ಹೊಸ ಪೋಸ್ಟರ್ ಕೂಡ ಬಿಡುಗಡೆಯಾಗಲಿದೆ. ‘ಲವ್...ಲಿ’ ರೌಡಿಸಂ ಕಥಾಹಂದರವಿರುವ ಕಮರ್ಷಿಯಲ್ ರೊಮ್ಯಾಂಟಿಕ್ ಲವ್​ಸ್ಟೋರಿಯಾಗಿದ್ದು, ಚಿತ್ರಕ್ಕೆ ಚೇತನ್ ಕೇಶವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರವನ್ನು ಎಂ.ಆರ್. ರವೀಂದ್ರ ನಿರ್ವಿುಸುತ್ತಿದ್ದು, ಹರೀಶ್ ಕೊಮ್ಮೆ ಸಂಕಲನ, ಅಶ್ವಿನ್ ಕೆನಡಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net