

ನಮ್ಮಲ್ಲಿ ಗೊಂಬೆ ಕೂಡಿಸುವ ಪದ್ಧತಿ ಇಲ್ಲ. ಆದರೆ, ಸರಸ್ವತಿ ಪೂಜೆ ಮತ್ತು ಆಯಧ ಪೂಜೆಯನ್ನು ಖಂಡಿತಾ ಮಾಡುತ್ತೇವೆ. ನಾನು ಚಿಕ್ಕಂದಿನಲ್ಲಿ ಭರತನಾಟ್ಯಂ ಕಲಿಯುತ್ತಿದ್ದಾಗ, ಆಯುಧ ಪೂಜೆಯ ಸಂದರ್ಭದಲ್ಲಿ ನಮ್ಮ ಗೆಜ್ಜೆಗಳನ್ನಿಟ್ಟು ಪೂಜೆ ಮಾಡಿಸುತ್ತಿದ್ದರು. ಮನೆಯಲ್ಲೂ ಸೈಕಲ್ ತೊಳೆದು ಪಟ್ಟೆ ಬಳಿದು ಸಂಭ್ರಮಿಸುತ್ತಿದ್ದೆವು. ಇನ್ನು, ನಮ್ಮ ಅಜ್ಜಿ ಮನೆ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿತ್ತು.
ಅಲ್ಲಿ ನಮ್ಮ ತಾತ ಹೋಟೆಲ್ವೊಂದನ್ನು ಇಟ್ಟಿದ್ದರು. ಸುತ್ತಮುತ್ತಲಿದ್ದ ಫ್ಯಾಕ್ಟರಿಯವರು ಸ್ವೀಟ್ ಕೊಡುತ್ತಿದ್ದರು. ಹಾಗಾಗಿ, ನಮಗೆ ದಸರಾ ಎಂದರೆ ವಿಧವಿಧವಾದ ಸ್ವೀಟ್ ಸಿಗುತ್ತದೆ ಎಂದು ಸಂತೋಷವಾಗುತ್ತಿತ್ತು. ಸ್ವೀಟ್ ತಿನ್ನುವುದೇ ನಮಗೆ ದಸರಾ ಆಗಿತ್ತು. ನಿಜ ಹೇಳಬೇಕೆಂದರೆ, ಟಿವಿಯಲ್ಲಿ ನೋಡಿದ್ದು ಬಿಟ್ಟರೆ, ನಾನು ಇದುವರೆಗೂ ಮೈಸೂರು ದಸರಾ ಮೆರವಣಿಗೆಯನ್ನು ನೋಡಿಲ್ಲ.
ಈ ಬಾರಿ ನೋಡಬೇಕು ಎಂದು ಬಹಳ ಆಸೆ ಇತ್ತು. ಆದರೆ, ಶೂಟಿಂಗ್ನಿಂದಾಗಿ ಊರಿನಲ್ಲಿ ಇರಲು ಆಗುತ್ತಿಲ್ಲ. ಹೊಸ ಚಿತ್ರದ ಚಿತ್ರೀಕರಣಕ್ಕೆಂದು ಸದ್ಯದಲ್ಲೇ ಲಂಡನ್ಗೆ ಹೋಗುತ್ತಿದ್ದೇನೆ. ಹಬ್ಬ ಮುಗಿದ ಮೇಲೆ ಪುನಃ ಬೆಂಗಳೂರಿಗೆ ವಾಪಸ್ಸಾಗುತ್ತೇನೆ.
| ಖುಷಿ ರವಿ