ನಯನತಾರಾಗೂ ಹಲವರ ಜತೆ ಸಂಬಂಧ ಇದೆ ... ಕಾಲೆಳೆದವರ ಬಾಯ್ಮುಚ್ಚಿಸಿದ ಶ್ರೀರೆಡ್ಡಿ

Nayanatara - Sri Reddy Final
Published on

ಮೀಟೂ ಖ್ಯಾತಿಯ ಟಾಲಿವುಡ್ ನಟಿ ಶ್ರೀರೆಡ್ಡಿ ಅಭಿನಯಕ್ಕಿಂತ ಹೆಚ್ಚಾಗಿ ಬೇರೆ ವಿಷಯಗಳಲ್ಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ನಟಿಸಿರುವ ಬೆರಳಣಿಕೆಯಷ್ಟು ಚಿತ್ರಗಳಿಂದ ಗುರುತಿಸಿಕೊಳ್ಳುವುದಕ್ಕಿಂತ ಬೇರೆ ವಿಷಯಗಳಿಂದಲೇ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಈಗ್ಯಾಕೆ ಶ್ರೀರೆಡ್ಡಿ ಬಗ್ಗೆ ಮಾತು ಅಂತೀರಾ? ಈ ನಟಿ ಇದೀಗ ನಯನತಾರಾಗೆ ಟಾಂಗ್ ಕೊಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಭಾರೀ ಜನಪ್ರಿಯರಾಗಿರುವ ಶ್ರೀರೆಡ್ಡಿಗೆ ಇತ್ತೀಚೆಗೆ ಯಾರೋ ಸಖತ್ತಾಗಿ ಕಾಲೆಳೆದಿದ್ದರು. ಆಕೆಯ ಹಲವು ಸಂಬಂಧಗಳ ಕುರಿತು ಬೈದಿದ್ದರು. ಇದಕ್ಕೆ ಸಿಕ್ಕಾಪಟ್ಟೆ ಸಿಟ್ಟಾಗಿ ಉತ್ತರ ಕೊಟ್ಟಿರುವ ಶ್ರೀರೆಡ್ಡಿ, ‘ಬೇರೆಯವರ ಬಗ್ಗೆ ಹೀಗೆ ಮಾತನಾಡುವುದನ್ನು ಬಿಡಿ. ಸ್ಟಾರ್ ನಟಿಯರ ಬಗ್ಗೆ ಮಾತನಾಡುವುದಕ್ಕೆ ನಿಮಗೆ ಧೈರ್ಯ ಇಲ್ಲ. ತಾಕತ್ತಿದ್ದರೆ ಇದೇ ಮಾತನ್ನು ನಯನತಾರಾಗೆ ಹೇಳಿ. ನಯನತಾರಾ ಸಹ ಹಲವರ ಜತೆಗೆ ಸಂಬಂಧ ಇಟ್ಟುಕೊಂಡಿದ್ದರು. ಅವರ ಬಗ್ಗೆ ಮಾತಾಡೋಕೆ ಮಾತಾಡಿ ನೋಡೋಣ’ ಎಂದು ಸವಾಲು ಹಾಕಿದ್ದಾರೆ.

ಇತ್ತೀಚೆಗೆ ಪ್ರಭುದೇವ ಅವರ ಮಾಜಿ ಪತ್ನಿ ಲತಾ ಸಹ ನಯನತಾರಾ ವಿರುದ್ಧ ಹರಿಹಾಯ್ದಿದ್ದರು. ನಯನತಾರಾ ಅವರಿಂದಲೇ ತಮ್ಮ ಸಾಂಸಾರಿಕ ಜೀವನ ಹಾಳಾಯಿತು ಮತ್ತು ಪ್ರಭುದೇವ ತಮ್ಮಿಂದ ದೂರವಾಗಬೇಕಾಯಿತು ಎಂದು ಆರೋಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net