ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ್ರಾ ಕಿಸ್​ ಬೆಡಗಿ? ಇಂದು ಮಹಾದಿನ ಅಂದಿದ್ದೇಕೆ? ಇನ್​ಸ್ಟಾ ಸ್ಟೋರಿ ಸುಳಿವು... Sreeleela

Sreeleela
Published on

Sreeleela : ಪ್ರಸ್ತುತ ತೆಲುಗು ಚಿತ್ರರಂಗದ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರಾದ ಶ್ರೀಲೀಲಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ. ಅದಕ್ಕೆ ಕಾರಣ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಇತ್ತೀಚಿನ ವಿಡಿಯೋ ಮತ್ತು ಫೋಟೋಗಳು.

ಶ್ರೀಲೀಲಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ವಧುವಿನಂತೆ ಪೋಸ್ ನೀಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ತಮ್ಮ ಕೆನ್ನೆಗಳಿಗೆ ಅರಿಶಿನ ಹಚ್ಚಿಕೊಂಡಿರುವ ಮತ್ತು ಅವರಿಗೆ ಅವರ ಆಪ್ತರು ಆಶೀರ್ವಾದ ಮಾಡುತ್ತಿರುವ ಫೋಟೋಗಳನ್ನು ಕೊಲ್ಯಾಜ್​ ಮಾಡಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ನನ್ನ 'ಮಹಾದಿನ' ಮತ್ತು 'ಶೀಘ್ರದಲ್ಲೇ ಬರುತ್ತೇನೆ' ಎಂದು ಹೇಳುವ ಮೂಲಕ ಶೀಘ್ರದಲ್ಲೇ ಪೂರ್ಣ ವಿವರಗಳನ್ನು ಹೇಳುವ ಸುಳಿವು ನೀಡಿದ್ದಾರೆ.

Sreeleela 1

ಯಾವಾಗ ಶ್ರೀಲೀಲಾ ಈ ಮಾತುಗಳನ್ನು ಹೇಳಿದರೋ ನೆಟ್ಟಿಗರು ಸಹ ಒಂದು ಸ್ಪಷ್ಟನೆಗೆ ಬಂದಿದ್ದಾರೆ. ಶ್ರೀಲೀಲಾ ಅವರು ಮೌನವಾಗಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂದು ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಅವರಿಗೆ ಅಭಿನಂದನೆಗಳನ್ನು ಸಹ ಸಲ್ಲಿಸುತ್ತಿದ್ದಾರೆ.

Sreeleela 2

ಬಾಲಿವುಡ್ ನಟನ ಜತೆ ಡೇಟಿಂಗ್

ಪ್ರಸ್ತುತ ಶ್ರೀಲೀಲಾ ಅವರ ಡೇಟಿಂಗ್ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಿ-ಟೌನ್ ಹೀರೋ ಕಾರ್ತಿಕ್ ಆರ್ಯನ್ ಅವರನ್ನು ಪ್ರೀತಿಸುತ್ತಿದ್ದಾರೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸಿನಿಮಾ ವಲಯದಲ್ಲಿ ಹರಿದಾಡುತ್ತಿದೆ. ನಿರ್ದೇಶಕ ಅನುರಾಗ್ ಬಸು ನಿರ್ದೇಶನದ ಸಿನಿಮಾದಲ್ಲಿ ಇಬ್ಬರು ನಟಿಸುತ್ತಿದ್ದಾರೆ. ಹೀಗಾಗಿ ಈ ವದಂತಿ ಹರಿದಾಡುತ್ತಿದೆ. ಇಡೀ ಕುಟುಂಬ ಕಾರ್ತಿಕ್ ಆರ್ಯನ್ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾಗ, ಶ್ರೀಲೀಲಾ ಕೂಡ ಅಲ್ಲಿ ಕಾಣಿಸಿಕೊಂಡರು. ಅಲ್ಲದೆ, ಇತ್ತೀಚೆಗೆ ಕಾರ್ತಿಕ್ ಅವರ ತಾಯಿ IIFA ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿದ ಹೇಳಿಕೆಗಳು ಈ ವದಂತಿಗಳಿಗೆ ಮತ್ತಷ್ಟು ಬಲ ತುಂಬಿವೆ. ನಿಮಗೆ ಯಾವ ರೀತಿಯ ಸೊಸೆ ಬೇಕು ಎಂದು ಕರಣ್​ ಜೋಹರ್ ಅವರು ಕೇಳಿದಾಗ, ನನ್ನ ಸೊಸೆ ಡಾಕ್ಟರ್​ ಆಗಿರಬೇಕು ಬೇಕು ಎಂದು ಹೇಳಿದರು. ಇದು ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳಿಗೆ ಮತ್ತಷ್ಟು ಬಲ ತುಂಬಿದೆ. ಏಕೆಂದರೆ, ಶ್ರೀಲೀಲಾ ಕೂಡ ಡಾಕ್ಟರ್​ ಕೋರ್ಸ್ ಮುಗಿಸಿದ್ದಾರೆ. ಇದು ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬ ವದಂತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಸಂಭಾವನೆ ಇಳಿಸಿಕೊಂಡ ಶ್ರೀಲೀಲಾ

ಸಿನಿಮಾ ವಿಚಾರಕ್ಕೆ ಬಂದರೆ, ‘ಪುಷ್ಪ 2: ದ ರೂಲ್’ ಚಿತ್ರದ ‘ಕಿಸ್ ಕಿಸಕ್’ ವಿಶೇಷ ಹಾಡಿನ ನೃತ್ಯದ ಬಳಿಕ ನಟಿ ಶ್ರೀಲೀಲಾ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಕನ್ನಡ, ತೆಲುಗು ಚಿತ್ರರಂಗದಲ್ಲಿ ಮಿಂಚಿರುವ ಅವರು, ‘ಪುಷ್ಪ-2’ ಬಳಿಕ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್‌ಗೂ ಎಂಟ್ರಿಯಾಗಿದ್ದಾರೆ. ಕಾರ್ತಿಕ್ ಆರ್ಯನ್ ಅಭಿನಯದ ‘ಆಶಿಕಿ-3’ ಮೂಲಕ ಹಿಂದಿ ಚಿತ್ರರಂಗಕ್ಕೆ ಡೆಬ್ಯೂ ಮಾಡಿರುವ ಶ್ರೀಲೀಲಾ, ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ಆರಂಭವಾಗಿವೆ. ಇದೇ ದೀಪಾವಳಿಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ಈ ಮಧ್ಯೆ, ಹಿಂದಿ ಚಿತ್ರಕ್ಕೆ ಶ್ರೀಲೀಲಾ ಸಂಭಾವನೆಯನ್ನು ಇಳಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿಹಾಡುತ್ತಿದೆ. ‘ಆಶಿಕಿ-3’ ಸಿನಿಮಾಕ್ಕೆ ಶ್ರೀಲೀಲಾ 2 ಕೋಟಿ ರೂ. ಸಂಭಾವನೆ ಪಡೆದಿದ್ದು, ಹಿಂದಿನ ಚಿತ್ರಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದೆ. ‘ಪುಷ್ಪ-2’ ಚಿತ್ರದ ‘ಕಿಸಕ್’ ಹಾಡು ಹಾಗೂ ‘ರಾಬಿನ್‌ಹುಡ್’ ಚಿತ್ರಕ್ಕೆ ಬರೋಬ್ಬರಿ 3 ಕೋಟಿ ರೂ. ಪಡೆದಿದ್ದರು. ಕಲಾವಿದರು ಒಂದು ಸಿನಿಮಾದ ಯಶಸ್ಸಿನ ಬಳಿಕ ಮತ್ತೊಂದು ಚಿತ್ರಕ್ಕೆ ಸಂಭಾವನೆ ಹೆಚ್ಚಿಸಿಕೊಳ್ಳುವುದು ವಾಡಿಕೆ. ಆದರೆ, ಶ್ರೀಲೀಲಾ ಮಾತ್ರ ಸಂಭಾವನೆ ಇಳಿಸಿಕೊಂಡಿರುವುದು ಯಾಕೆ ಎಂಬುದು ಚರ್ಚೆಗೀಡಾಗಿದೆ. ಬಾಲಿವುಡ್‌ನಲ್ಲಿ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ನಟಿ ಈ ಮಾರ್ಗ ಅನುಸರಿಸಿರಬಹುದು ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಶ್ರೀಲೀಲಾ ಎಲ್ಲಿಯೂ ಮಾತನಾಡಿಲ್ಲ. ಇನ್ನು ಉಳಿದಂತೆ, ಅವರು ಕನ್ನಡದ ‘ಜೂನಿಯರ್’, ತೆಲುಗಿನ ‘ಮಾಸ್ ಜಾತರ’, ‘ಲೆನಿನ್’, ತಮಿಳಿನ ‘ಪರಾಶಕ್ತಿ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net