ಹಾಸನದಲ್ಲಿ ಅಪ್ಪುಗೆ ಬೆಳಕಿನ ನಮನ! ಫೋಟೋ ವೈರಲ್...

Published on
ಹಾಸನ: ಪುನೀತ್ ರಾಜ್​ಕುಮಾರ್ ನಿಧನರಾಗಿ ಎರಡು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಆದರೆ, ಯಾರೂ ಅವರ ಹೆಸರನ್ನು, ನಟಿಸಿದ ಸಿನಿಮಾಗಳನ್ನು, ಮಾಡಿದ ಕೆಲಸಗಳನ್ನು, ನಟನಿಂದ ಪಡೆದ ಸಹಾಯವನ್ನು ಇಂದಿಗೂ ಮರೆತಿಲ್ಲ. ಅಪ್ಪು ಅಭಿಮಾನಿಗಳ ಎದೆಯಲ್ಲಿ ಅಜರಾಮರ ಎಂದೇ ಹೇಳಬೇಕು. ಹಲವರು ನಟನಿಗೆ ಹಲವಾರು ರೀತಿಗಳಲ್ಲಿ ನಮನಗಳು ಸಲ್ಲಿಸಿದ್ದಾರೆ. ಇದೀಗ, ಹಾಸನ ಜೆಲ್ಲೆಯವರು ಅವರಿಗೆ ಅಪ್ಪು ಮೇಲಿರುವ ಅಭಿಮಾನವನ್ನು ವಿಭಿನ್ನವಾಗಿ ತೋರಿಸಿಕೊಟ್ಟಿದ್ದಾರೆ. ಹೌದು, ಪುನೀತ್ ಅವರ ನಗು, ಮತ್ತು ಸಹಾಯ ಮಾಡುವ ವ್ಯಕ್ತಿತ್ವ ಬಹಳಷ್ಟು ಅಭಿಮಾನಿಗಳು ಮತ್ತು ಬೇರೆ ಬೇರೆಯವರ ಬದುಕಿಗೆ ಬೆಳಕು ನೀಡಿದೆ. 
ಹೀಗಾಗಿ, ಹಾಸನದಲ್ಲಿ ಅಪ್ಪುಗೆ ಬೆಳಕಿನ ನಮನಗಳನ್ನು ಸಲ್ಲಿಸಲಾಗಿತ್ತು. ಹಾಸನ ಜೆಲ್ಲೆಯ ಚನ್ನರಾಯಪಟ್ಟಣದಲ್ಲಿ ಎಂಎಲ್​ಸಿ ಸೂರಜ್ ರೆವಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಪ್ಪು ಗೌರವಾರ್ಥ ಎಲ್ಲಾ ಲೈಟ್​​ಗಳನ್ನು ಆಫ್ ಮಾಡಿ ಮೊಬೈಲ್ ಟಾರ್ಚ್ ಆನ್ ಮಾಡಿ ಅಪ್ಪುಗೆ ವಿಶೇಷ ಗೌರವ ಸಲ್ಲಿಸಲಾಯಿತು. ಭವಾನಿ ರೆವಣ್ಣ, ಎಂಎಲ್​ಸಿ ಸೂರಜ್ ರೆವಣ್ಣ ಸೇರಿದಂತೆ ಸಾವಿರಾರು ಮಂದಿ ಅಭಿಮಾನಿಗಳು, ಕ್ರೀಡಾಪಟುಗಳು ಏಕಕಾಲಕ್ಕೆ ತಮ್ಮ ಮೊಬೈಲ್ ಟಾರ್ಚ್​​ಗಳನ್ನು ಆನ್ ಮಾಡಿ ಜೊತೆಗೆ ಪುನೀತ್ ಪರ ಘೋಷಣೆಗಳನ್ನು ಸಹ ಕೂಗಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net