ನ. 17ಕ್ಕೆ ಸ್ಪಾರ್ಕ್ ಲೈಫ್; ವಿಕ್ರಾಂತ್‌ಗೆ ಮೆಹ್ರೀನ್ ಪೀರ್ಜಾದಾ, ರುಖ್ಸಾರ್ ನಾಯಕಿಯರು

spark life
Published on

ತೆಲುಗು ನಟ ವಿಕ್ರಾಂತ್ ಕಥೆ, ಚಿತ್ರಕಥೆ ಬರೆದು ನಾಯಕನ ನಟಿಸಿರುವ ಚಿತ್ರ ‘ಸ್ಪಾರ್ಕ್ ಲ್ೈ’. ಡೆಫ್ ಫ್ರಾಗ್ ಪ್ರೊಡಕ್ಷನ್ಸ್‌ನಲ್ಲಿ ನರೇಶ್ ರೆಡ್ಡಿ ಮತ್ತು ಬೋರೆಡ್ಡಿ ಲೀಲಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿಕ್ರಾಂತ್‌ಗೆ ಇಬ್ಬರು ನಾಯಕಿಯರಿದ್ದು ಮೆಹ್ರೀನ್ ಪೀರ್ಜಾದಾ ಮತ್ತು ರುಖ್ಸಾರ್ ಧಿಲ್ಲೋನ್ ನಟಿಸಿದ್ದಾರೆ.

‘ಸ್ಪಾಕ್ ಲ್ೈ’ಗೆ ‘ಹೃದಯಂ’ ಮತ್ತು ‘ಖುಷಿ’ ಖ್ಯಾತಿಯ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ. ಮಲಯಾಳಂನ ಹಿರಿಯ ನಟ ಗುರು ಸೋಮಸುಂದರಂ ಪ್ರಮುಖ ವಿಲನ್ ಪಾತ್ರದಲ್ಲಿ ನಟಿಸಿದ್ದು, ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ. ಆ್ಯಕ್ಷನ್, ಲವ್ ಜತೆಗೆ ಎಮೋಷನಲ್ ಅಂಶಗಳನ್ನಿಟ್ಟುಕೊಂಡು ಚಿತ್ರ ಮಾಡಲಾಗಿದೆ.

ವಿಕ್ರಾಂತ್, ಮೆಹ್ರೀನ್, ರುಖ್ಸಾರ್, ಗುರು ಜತೆ ನಾಸರ್, ಸುಹಾಸಿನಿ ಮಣಿರತ್ನಂ, ವೆನ್ನೆಲಾ ಕಿಶೋರ್, ಸತ್ಯ, ಬ್ರಹ್ಮಾಜಿ ತಾರಾಗಣದಲ್ಲಿ ನಟಿಸಿದ್ದಾರೆ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ಇದೇ ನ. 17ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net