

South Actress : ಕ್ಷಣ ಕ್ಷಣ, ಗನ್ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್ ರಾಥೋಡ್ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದರೆ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್ ಪಾತ್ರಗಳಿಂದಲೂ ಕಿರಣ್ ಖ್ಯಾತಿ ಪಡೆದಿದ್ದರು. ಅವಕಾಶಗಳಿಲ್ಲದೇ ಸಿನಿ ಲೋಕದಿಂದ ದೂರವಿರುವ ಕಿರಣ್, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಇದೀಗ ಸಿನಿಮಾಗಳತ್ತ ಮತ್ತೆ ಮುಖ ಮಾಡಿದ್ದಾರೆ.
2016 ರಿಂದ ಕಿರಣ್ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಸಮಯದಲ್ಲಿ ಕಿರಣ್ ರಾಥೋಡ್ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಾಟ್ ಚಿತ್ರಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹಾಟ್ಲುಕ್ ನಲ್ಲಿರುವ ನಟಿಯ ಚಿತ್ರಗಳು ಬಿಸಿ ಕೇಕ್ನಂತೆ ಮಾರಾಟವಾಗುತ್ತಿವೆ.
2022ರಲ್ಲಿ, ಕಿರಣ್ ರಾಥೋಡ್ ಅವರು ಚಂದಾದಾರಿಕೆ ಅಪ್ಲಿಕೇಶನ್ ಒಂದನ್ನು ಪ್ರಾರಂಭಿಸಿದರು. ಈ ಆ್ಯಪ್ನಲ್ಲಿ ಕಿರಣ್ ತಮ್ಮ ಹಾಟ್ ಚಿತ್ರಗಳು ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಅಂದಹಾಗೆ, ಕಿರಣ್ ತಮ್ಮ ಅಭಿಮಾನಿಗಳಿಗಾಗಿ kiran.celebgaze.in ಎಂಬ ಆ್ಯಪ್ ಮತ್ತು ವೆಬ್ಸೈಟ್ ತೆರೆದಿದ್ದಾರೆ. ಮೊಬೈಲ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ 49 ರೂ. ಪಾವತಿಸಬೇಕು. ಆ್ಯಪ್ ಮೂಲಕ ನೀವು ಸಾವಿರಾರು ರೂಪಾಯಿ ಪಾವತಿಸಿದರೆ ಕಿರಣ್ ಅವರು ಗ್ಲಾಮರಸ್ ಫೋಟೋಗಳನ್ನು ಕಳುಹಿಸಲಿದ್ದಾರಂತೆ. ಈಗಾಗಲೇ ಹಣ ಪಡೆಯುವ ಮೂಲಕ ಅಭಿಮಾನಿಗಳಿಗೆ ತಮ್ಮ ಗ್ಲಾಮರಸ್ ಅವತಾರವನ್ನು ಕಿರಣ್ ರಾಥೋಡ್ ಅನಾವರಣಗೊಳಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಗ್ಲಾಮರಸ್ ಫೋಟೋಗಳು ಸಣ್ಣ ಝಲಕ್ ಅನ್ನು ಕಿರಣ್ ಹರಿಬಿಡುತ್ತಿರುತ್ತಾರೆ. ಮತ್ತಷ್ಟು ಹಾಟ್ ಅವತಾರಕ್ಕಾಗಿ ಆ್ಯಪ್ ಮೊರೆ ಹೋಗಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಸದ್ಯ ಈ ಅಪ್ಲಿಕೇಶನ್ಗೆ ಅನೇಕ ಫಾಲೋವರ್ಸ್ ಕೂಡ ಇದಾರೆ.
ಇದೇ ಸಂದರ್ಭದಲ್ಲಿ ಕಿರಣ್, ಹಲವು ವರ್ಷಗಳ ನಂತರ ನಟಿ ವನಿತಾ ವಿಜಯಕುಮಾರ್ ನಟಿಸಿದ ಮಿಸ್ಟರ್ ಅಂಡ್ ಮಿಸೆಸ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಈ ಚಿತ್ರ ಜುಲೈ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹೀಗಾಗಿ, ಕಿರಣ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ. ಅವರು ಸಿನಿಮಾಗಳಲ್ಲಿ ಮುಂದುವರಿಯುತ್ತಾರೋ ಅಥವಾ ಅಪ್ಲಿಕೇಶನ್‌ನೊಂದಿಗೆ ಮುಂದುವರಿಯುತ್ತಾರೋ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಬಯಸಿದ್ದಾರೆ. (ಏಜೆನ್ಸೀಸ್)