ಚಾರ್ಟರ್ಡ್​ ಫ್ಲೈಟ್​ ಮಾಡಿ ಕಾರ್ಮಿಕರನ್ನು ಡೆಹರಾಡೂನ್​ಗೆ ಕಳಿಸಿದ ಸೂದ್​!

Sonu Sood - Final
Published on

ಲಾಕ್​ಡೌನ್​ ಮುಗಿದಾಗಿನಿಂದ ವಲಸೆ ಕಾರ್ಮಿಕರಿಗೆ ಒಂದಲ್ಲ ಒಂದು ರೀತಿಯ ಸಹಾಯ ಮಾಡುತ್ತಲೇ ಬಂದಿರುವ ಬಾಲಿವುಡ್​ನ ಖ್ಯಾತ ನಟ ಸೋನು ಸೂದ್​, ಈಗ ಇನ್ನೊಂದು ಒಳ್ಳೆಯ ಕೆಲಸ ಮಾಡಿ, ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ. ಮುಂಬೈನಲ್ಲಿ ಕೆಲಸ ಮಾಡುತ್ತಿರುವ 170 ಕಾರ್ಮಿಕರನ್ನು ಅವರು ಡೆಹರಾಡೂನ್​ಗೆ ಚಾರ್ಟಡ್​​ರ್ ಫ್ಲೈಟ್​ ಮೂಲಕ ಕಳಿಸಿಕೊಟ್ಟಿದ್ದಾರೆ.

ಹೌದು, ನಿನ್ನೆ ಸೋನು ಸೂದ್​, ಒಂದು ಸ್ಪೆಷಲ್​ ಫ್ಲೈಟ್​ ಮೂಲಕ 170 ಕಾರ್ಮಿಕರನ್ನು ಮುಂಬೈನಿಂದ ಉತ್ತರಖಾಂಡದ ಡೆಹರಾಡೂನ್​ಗೆ ಕಳುಹಿಸಿಕೊಟ್ಟಿದ್ದಾರೆ. ಏರ್​ಏಷ್ಯಾ ವಿಮಾನದಲ್ಲಿ ತಮ್ಮ ತವರೂರಿಗೆ ವಾಪಸ್ಸಾದ ಈ ಕಾರ್ಮಿಕರು, ಸೋನು ಸೂದ್​ ಅವರನ್ನು ಮನತುಂಬಿ ಹಾರೈಸುತ್ತಿದ್ದಾರೆ.

ಇದಕ್ಕೂ ಮುನ್ನ ಕಳೆದ ವಾರ, ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಒಡಿಶ್ಶಾದ 160 ಮಂದಿ ಜನರನ್ನು ಸೂದ್​, ವಿಶೇಷ ವಿಮಾನ ಮಾಡಿ ಅವರೂರಿಗೆ ಕಳುಹಿಸಿಕೊಟ್ಟಿದ್ದರು. ಅದಕ್ಕೂ ಮುನ್ನ ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಬೇರೆಬೇರೆ ರಾಜ್ಯದ ಹಲವು ಕಾರ್ಮಿಕರನ್ನು ಬಸ್​ಗಳ ಮೂಲಕ ಅವರ ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದರು. ರೈಲಿನಲ್ಲಿ ಹೋಗುತ್ತಿರುವವರಿಗೆ ಅಗತ್ಯ ನೆರುವ ನೀಡಿದ್ದರು.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಎಷ್ಟೋ ಜನರನ್ನು ಫ್ಲೈಟ್​ನಲ್ಲಿ ಪ್ರಯಾಣ ಮಾಡಿರಲೇ ಇಲ್ಲವಂತೆ. ವಾಪಸ್ಸು ಮನೆಗೆ ಹೋಗುತ್ತಿರುವುದಷ್ಟೇ ಅಲ್ಲ, ಹೀಗೆ ಮೊದಲ ಬಾರಿಗೆ ಪ್ರಯಾಣ ಮಾಡುತ್ತಿರುವುದು ಅವರ ಸಂತೋಷ ಇಮ್ಮಡಿಗೊಳಿಸಿದೆ. ಅವರ ಸಂತೋಷ ನೋಡಿ, ಸಾರ್ಥಕತೆ ಆವರಿಸಿದೆ ಎಂದು ಸೋನು ಸೂದ್​ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net