ಹಾಡುವುದನ್ನೇ ನಿಲ್ಲಿಸುವಂತೆ ಮಾಡಿದೆಯೇ ಆ ಭೀಕರ ಕಾಯಿಲೆ..? ಸೋನು ನಿಗಮ್ ಅವರ ಆ ಒಂದು ಮಾತಿನಿಂದ ಅಭಿಮಾನಿಗಳಲ್ಲಿ ಆತಂಕ! Sonu Nigam

Sonu Nigam (ಚಿತ್ರ X)
Sonu Nigam (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಗಾಯಕ ಸೋನು ನಿಗಮ್ ಅವರು ಪ್ರಸ್ತುತ ತೀವ್ರತರವಾದ ನರ ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ
  • ಈ ಕಾಯಿಲೆಯು ಅವರ ದೈನಂದಿನ ಜೀವನದ ಮೇಲಷ್ಟೇ ಅಲ್ಲದೆ, ಅವರ ಧ್ವನಿಯ ಮೇಲೂ ಪರಿಣಾಮ ಬೀರಿದೆ
  • ಕಳೆದ ವಾರದಿಂದ ನಿರಂತರವಾಗಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳು ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದೇನೆ
Sonu Nigam: ಗಾಯಕ ಸೋನು ನಿಗಮ್ ಅವರು ಪ್ರಸ್ತುತ ತೀವ್ರತರವಾದ ನರ ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಕಾಯಿಲೆಯು ಅವರ ದೈನಂದಿನ ಜೀವನದ ಮೇಲಷ್ಟೇ ಅಲ್ಲದೆ, ಅವರ ಧ್ವನಿಯ ಮೇಲೂ ಪರಿಣಾಮ ಬೀರಿದೆ ಎಂದು ಸ್ವತಃ ಅವರೇ ವಿಡಿಯೋ ಮೂಲಕ ಹೇಳಿಕೊಂಡಿದ್ದು, ಸದ್ಯ ಕೋಟ್ಯಾಂತರ ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ವಿಡಿಯೋದಲ್ಲೇನಿದೆ?

ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಸೋನು ನಿಗಮ್, ನರಗಳ ಸೆಟೆದುಕೊಂಡ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ವಾರದಿಂದ ನಿರಂತರವಾಗಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳು ಸೇರಿದಂತೆ ಹಲವು ಪ್ರಮುಖ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿರುವುದಾಗಿ ಹೇಳಿದ್ದಾರೆ.
ಆದಾಗ್ಯೂ, ನನಗೆ ಸ್ವಲ್ಪ ಆಯಾಸವಾಗುತ್ತಿದೆ. ಒಂದು ವಾರದಿಂದ ನಾನು ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳನ್ನು ಮಾಡಿಸಿಕೊಂಡಿದ್ದೇನೆ. ಜೊತೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎನ್ನುತ್ತಾ, ತಮ್ಮ ಭುಜದ ಮೇಲಿನ ವೈದ್ಯಕೀಯ ಪ್ಯಾಚ್​ನ್ನು ವಿಡಿಯೋದಲ್ಲಿ ತೋರಿಸಿದ್ದಾರೆ.
ಭೌತಚಿಕಿತ್ಸೆಯು ತುಂಬಾ ನೋವಿನಿಂದ ಕೂಡಿದೆ. ನಾನು ಈಗ ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಅದಕ್ಕಾಗಿಯೇ ನನ್ನ ಗಂಟಲು ಸ್ವಲ್ಪ ಭಾರವಾಗಿದೆ ಎಂದು ಸೋನು ತಿಳಿಸಿದ್ದಾರೆ.
ವೃತ್ತಿಪರ ಗಾಯಕನಾಗಿರುವ ಸೋನು ಅವರಿಗೆ ಧ್ವನಿಯಲ್ಲಿನ ಯಾವುದೇ ಬದಲಾವಣೆ ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ. ಚಿಕಿತ್ಸೆ ವೇಳೆ ನೀಡಲಾಗುತ್ತಿರುವ ಸ್ನಾಯು ಸಡಿಲಗೊಳಿಸುವ ಔಷಧಿಗಳ ಪರಿಣಾಮವಾಗಿ ಅವರ ಧ್ವನಿಯಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿದ್ದು, ಗಂಟಲು ಸಾಮಾನ್ಯಕ್ಕಿಂತ ಭಾರವಾಗಿರುವ ಅನುಭವವಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಆದಾಗ್ಯೂ, ಚಿಕಿತ್ಸೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ವೃತ್ತಿಪರತೆ ಮತ್ತು ಅಭಿಮಾನಿಗಳ ಮೇಲಿರುವ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ ಸೋನು, ತೀವ್ರ ಅಸ್ವಸ್ಥತೆ, ಆಯಾಸ ಮತ್ತು ದೈಹಿಕ ಅಸಹನೀಯ ನೋವನ್ನು ಎದುರಿಸುತ್ತಿದ್ದರೂ, ಅವರು ಮೊದಲೇ ನಿಗದಿಯಾಗಿರುವ ಪ್ರದರ್ಶನವನ್ನು ರದ್ಧುಗೊಳಿಸದಿರಲು ಅವರು ನಿರ್ಧರಿಸಿದ್ದಾರೆ.
ಆದಾಗ್ಯೂ, ಜೂನ್ 13, ಮುಂಬೈ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡ ಗಾಯಕ, ದೀರ್ಘ ಅಂತರದ ನಂತರ ಮತ್ತೆ ವೇದಿಕೆಗೆ ಬರಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net