ದೂರ ಹೋಗಿಲ್ಲ ಎಸ್ತರ್ ನರೋನ್ಹಾ; ಜನಪ್ರಿಯ ಹಾಡಾಯ್ತು ಚಿತ್ರದ ಶೀರ್ಷಿಕೆ

Estar
Published on

‘ಲಂಕೆ’ ನಂತರ ಎಸ್ತರ್ ನರೋನ್ಹಾ ಯಾವ ಚಿತ್ರದಲ್ಲಿ ನಟಿಸಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಏಕೆಂದರೆ, ಈ ಚಿತ್ರದ ನಂತರ ಎಸ್ತರ್ ಅಭಿನಯದ ಯಾವೊಂದು ಚಿತ್ರ ಸಹ ಘೋಷಣೆಯಾಗಿರಲಿಲ್ಲ. ಇದೀಗ ಅವರು ‘ಹೀಗೇಕೆ ನೀ ದೂರ ಹೋಗುವೆ?’ ಎಂಬ ಚಿತ್ರದಲ್ಲಿ ಸದ್ದಿಲ್ಲದೆ ನಟಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಈ ಚಿತ್ರದ ಕುರಿತು ಮಾತನಾಡುವ ಅವರು, ‘‘ನಾ ನಿನ್ನ ಮರೆಯಲಾರೆ’ಚಿತ್ರದಲ್ಲಿನ ನನಗಿಷ್ಟವಾದ ಗೀತೆಯ ಸಾಲಿದು. ಕಥೆಗೂ ಶೀರ್ಷಿಕೆಗೂ ಸಂಬಂಧವಿದೆ. ಇದು ತಂದೆ-ಮಗನ ಅವಿನಾಭಾವ ಸಂಬಂಧದ ಸುತ್ತ ಹಣೆಯಲಾದ ಕಥೆ. ಕನ್ನಡವಷ್ಟೇ ಅಲ್ಲದೆ, ಹಿಂದಿಯಲ್ಲಿ ‘ದಿ ವಿಸಿಟರ್ಸ್’ ಎಂಬ ಹೆಸರಿನಲ್ಲಿ ತಯಾರಾಗುತ್ತಿದೆ. ಜತೆಗೆ ಕೊಂಕಣಿ, ತಮಿಳು, ತೆಲುಗು ಹಾಗೂ ಮಲಯಾಳಂಗೆ ಡಬ್ ಆಗಿದೆ’ ಎನ್ನುತ್ತಾರೆ ಅವರು. ನಿರ್ದೇಶನದ ಜತೆಗೆ, ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದು, ಇದು ಅವರ ಅಭಿನಯದ 100ನೇ ಚಿತ್ರವಂತೆ.

ಈ ಚಿತ್ರದಲ್ಲೊಂದು ಬಹಳ ಒಳ್ಳೆಯ ಪಾತ್ರವಿದೆ ಎನ್ನುವ ಎಸ್ತರ್, ‘ನಾನು ಹಾಗೂ ಸಂದೀಪ್ ಮಲಾನಿ ಇಬ್ಬರೂ ‘ಶಕೀಲ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಒಂದು ದಿನ ಫೋನ್ ಮಾಡಿ ಈ ಚಿತ್ರದ ಬಗ್ಗೆ ಹೇಳಿದರು. ಬಹಳ ಒಳ್ಳೆಯ ಪಾತ್ರವನ್ನು ನನಗೆ ಅವರು ಕೊಟ್ಟಿದ್ದಾರೆ. ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ’ ಎಂದು ನಂಬಿದ್ದಾರೆ. ಚಿತ್ರವನ್ನು ರಾಜೇಶ್ ಚೌಧರಿ ನಿರ್ವಿುಸಿದ್ದಾರೆ. ಎಸ್ತರ್ ಜತೆಗೆ ನಿಹಾಲ್ ತಾವ್ರೋ, ಅಶ್ವಿನ್ ಡಿ’ಕೋಸ್ಟಾ, ರಾಜೀವ್ ಪಿಳ್ಳೆ ಮುಂತಾದವರು ನಟಿಸಿದ್ದು, ಸೆಲ್ವಂ ಛಾಯಾಗ್ರಹಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net