ಬೆಡ್‌ರೂಮ್ ಸೀಕ್ರೆಟ್ ಬಿಚ್ಚಿಟ್ಟ ಸೋನಮ್ ಕಪೂರ್

Sonam Kapoor Final
Published on

ಬಾಲಿವುಡ್‌ನ ಕ್ಯೂಟ್ ಕಪಲ್‌ಗಳಲ್ಲಿ ಬಹಳ ಜನಪ್ರಿಯ ಎಂದರೆ ಅದು ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ. ಒಂದೆರೆಡು ವರ್ಷಗಳ ಹಿಂದೆ ಆನಂದ್ ಜತೆಗೆ ಮದುವೆಯಾಗಿ ಸುಖಜೀವನ ನಡೆಸುತ್ತಿರುವ ಸೋನಮ್, ತಮ್ಮ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದೀಗ ತಮ್ಮ ಬೆಡ್‌ರೂಮ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ಏನದು ಬೆಡ್‌ರೂಮ್ ಸೀಕ್ರೆಟ್ ಎಂದು ಪ್ರಶ್ನೆ ಉದ್ಭವಿಸಬಹುದು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಅಂತಃಪುರದ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ, ಅವರ ಮಲಗುವ ಕೋಣೆಯಲ್ಲಿ ಮೊಬೈಲ್​ ಫೋನ್​‌ಗಳನ್ನು ಬ್ಯಾನ್ ಮಾಡಲಾಗಿದೆಯಂತೆ.

ಆಶ್ಚರ್ಯವಾದರೂ ಇದು ನಿಜ. ಈ ಕುರಿತು ಮಾತನಾಡಿರುವ ಅವರು, ‘ನಮ್ಮ ಮನೆಯಲ್ಲಿ ಮಲಗುವ ಕೋಣೆಗೆ ಮೊಬೈಲ್ ತೆಗೆದುಕೊಂಡು ಹೋಗುವ ಹಾಗಿಲ್ಲ. ಇದು ನನ್ನ ಗಂಡ ಮಾಡಿರುವ ರೂಲ್ಸು. ಇದನ್ನು ಇಬ್ಬರೂ ಮುರುಯುವಂತಿಲ್ಲ’ ಎಂದು ಸೋನಮ್ ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಮಲಗುವ ಕೋಣೆಯಲ್ಲಿ ಮೊಬೈಲ್ ಬ್ಯಾನ್ ಮಾಡಿರುವುದಕ್ಕೆ ಕಾರಣವೇನೆಂದರೆ, ‘ಮಲಗುವ ಕೋಣೆಗೆ ಹೋದ ನಂತರ, ನಾವು ಮೊಬೈಲ್ ನೋಡುತ್ತಾ ಕಾಲ ಕಳೆಯಬಾರದು, ಪರಸ್ಪರ ಮಾತಾಡುತ್ತಾ ಸಮಯ ಕಳೆಯಬೇಕು ಎನ್ನುವುದು ಆನಂದ್ ವಾದ. ಅದೇ ಕಾರಣಕ್ಕೆ ನಾವು ಬೆಡ್‌ರೂಮ್ ಒಳಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವುದಿಲ್ಲ’ ಎನ್ನುತ್ತಾರೆ ಸೋನಮ್.

ಗಂಡನ ಮಾತನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಸೋನಮ್, ಈ ನಿಯಮವನ್ನು ಬೇರೆಯವರಿಗೂ ಪಾಲಿಸುವುದಕ್ಕೆ ಕರೆ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net