ಡಬಲ್ ಖುಷಿಯಲ್ಲಿ ಸೋನಲ್

Sonal
Published on

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಸೋನಲ್ ಮೊಂತೆರೋ ಡಬಲ್ ಸಂಭ್ರಮದಲ್ಲಿದ್ದಾರೆ. ಅಂದರೆ, ಕೋವಿಡ್ ಹಿನ್ನೆಲೆಯಲ್ಲಿ ಶೂಟಿಂಗ್​ನಿಂದ ದೂರವೇ ಉಳಿದಿದ್ದ ಅವರೀಗ ಒಪ್ಪಿಕೊಂಡ ಸಿನಿಮಾಗಳ ಕೆಲಸವನ್ನು ಒಂದೊಂದಾಗಿ ಮುಗಿಸುತ್ತಿದ್ದಾರೆ. ಆ ಪೈಕಿ ‘ಡಾರ್ಲಿಂಗ್’ ಕೃಷ್ಣ ನಾಯಕನಾಗಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರದ ಚಿತ್ರೀಕರಣವನ್ನು ಮುಗಿಸಿರುವ ಅವರು, ಧ್ರುವನ್ ಜತೆಗಿನ ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಚಿತ್ರದ ಮೊದಲ ಹಂತದ ಶೂಟಿಂಗ್ ಸಹ ಮುಗಿಸಿದ್ದಾರೆ.

ಭರತ್ ಕ್ರಿಯೇಷನ್ಸ್ ಬ್ಯಾನರ್​ನಲ್ಲಿ ಭರತ್ ವಿಷ್ಣುಕಾಂತ್ ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಸಿನಿಮಾ ನಿರ್ವಿುಸುತ್ತಿದ್ದಾರೆ. ಈ ಹಿಂದೆ ‘ಕಥಾ ವಿಚಿತ್ರ’, ‘ಮೆಹಬೂಬ’ ಸಿನಿಮಾ ನಿರ್ದೇಶಿಸಿದ್ದ ಅನೂಪ್ ಅಂಟೋನಿ ಅವರಿಗಿದು ಮೂರನೇ ಸಿನಿಮಾ. ಮಾಸ್ ಆಕ್ಷನ್ ಶೈಲಿಯ ಈ ಸಿನಿಮಾದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಅರುಣ್ ಸುರೇಶ್ ಅವರ ಛಾಯಾಗ್ರಹಣವಿದೆ. ಸೋನಲ್ ನಾಯಕಿಯಾಗಿ ನಟಿಸಿರುವ ‘ಶುಗರ್ ಫ್ಯಾಕ್ಟರಿ’ ಸಿನಿಮಾ ಶೂಟಿಂಗ್ ಮುಗಿದಿದ್ದು, ಗಣೇಶ ಹಬ್ಬದ (ಸೆ. 10) ಪ್ರಯುಕ್ತ ಚಿತ್ರದ ಮೊದಲ ಲಿರಿಕಲ್ ಹಾಡು ಬಿಡುಗಡೆಯಾಗುತ್ತಿದೆ. ‘ಬಹದ್ದೂರ್’ ಚೇತನ್ ಸಾಹಿತ್ಯ ಬರೆದಿರುವ, ಕಬೀರ್ ರಫಿ ಸಂಗೀತ ನೀಡಿರುವ ಹಾಡಿಗೆ ರ್ಯಾಪರ್ ಬಾಬಾ ಸೆಹಗಲ್ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ದೀಪಕ್ ಅರಸ್ ನಿರ್ದೇಶನ ಮಾಡಿದ್ದು, ಗಿರೀಶ್ ಆರ್ ಬಂಡವಾಳ ಹೂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net