ಸೋಮು ಹಾಡಿನ ಸೌಂಡ್; ಅಭಿ ನಿರ್ದೇಶನದಲ್ಲಿ ಹೀರೋ ಆದ ‘ಸಲಗ’ ಚಿತ್ರದ ಕೆಂಡ

somu
Published on

ಬೆಂಗಳೂರು: ನಿರ್ದೇಶಕ ‘ದುನಿಯಾ’ ಸೂರಿ ಗರಡಿಯಲ್ಲಿ ಪಳಗಿರುವ, ‘ಕಡ್ಡಿಪುಡಿ’, ‘ಕೆಂಡಸಂಪಿಗೆ’, ‘ದೊಡ್ಮನೆ ಹುಡುಗ’, ‘ಟಗರು’ ಚಿತ್ರಗಳಲ್ಲಿ ಸಹ-ನಿರ್ದೇಶಕನಾಗಿ ಕೆಲಸ ಮಾಡಿರುವ ಅಭಿ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರ ‘ಸೋಮು ಸೌಂಡ್ ಇಂಜಿನಿಯರ್’.

ಇದು ಉತ್ತರ ಕರ್ನಾಟಕದ ಸೊಗಡಿನ ಚಿತ್ರವಾಗಿದ್ದು, ವಿಭಿನ್ನ ಕಥಾಹಂದರ ಹೊಂದಿದೆ ಎನ್ನುತ್ತಾರೆ ನಿರ್ದೇಶಕ ಅಭಿ. ‘ಸಲಗ’ ಚಿತ್ರದಲ್ಲಿ ಕೆಂಡ ಪಾತ್ರದಲ್ಲಿ ನಟಿಸಿದ್ದ ಶ್ರೇಷ್ಠ ಈ ಚಿತ್ರದ ನಾಯಕನಾಗಿದ್ದು, ಅವರಿಗೆ ಶೃತಿ ಪಾಟೀಲ್ ಜೋಡಿಯಾಗಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಮೊದಲ ಹಾಡಿನ ರೂಪದಲ್ಲಿ ಚಿತ್ರತಂಡ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದೆ. ‘ಸೋಮ ಸೋಮ…’ ಎಂದು ಸಾಗುವ ಈ ಹಾಡಿಗೆ ಚರಣ್ ರಾಜ್ ಸಂಗೀತಕ್ಕೆ, ಧನಂಜಯ್ ರಂಜನ್ ಸಾಹಿತ್ಯ ರಚಿಸಿದ್ದು, ಬಾಲಿವುಡ್‌ನಲ್ಲಿ ‘ಪಿಕೆ’, ‘ಪದ್ಮಾವತ್’, ‘ಭೋಲಾ’ ಸೇರಿ ಕನ್ನಡದ ‘ಮುಂಗಾರು ಮಳೆ 2’ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದ ಗಾಯಕ ಸ್ವರೂಪ್ ಖಾನ್ ಹಾಡಿದ್ದಾರೆ.

ಇದು ನಾಯಕ ಸೋಮು ಪರಿಚಯಿಸುವ ಹಾಡಾಗಿದ್ದು, ಈಗಾಗಲೇ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ಶ್ರೇಷ್ಠ, ಶೃತಿ ಜತೆ ಜಹಾಂಗೀರ್, ಅಪೂರ್ವ, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ, ಶಿವಸೇನಾ ಛಾಯಾಗ್ರಹಣವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net