ಕ್ರೈಸ್ತ ಸನ್ಯಾಸಿನಿಯಾಗಿದ್ದ ರೋಹಿತ್​​ ಶರ್ಮ ಮಾಜಿ ಪ್ರೇಯಸಿ ಈಗ ಏನ್​ ಮಾಡ್ತಿದ್ದಾರೆ! ಸೋಫಿಯಾ ರಹಸ್ಯ ಪ್ರಪಂಚ | Sofia Hayat

Sofia Hayat
Published on

ಮುಂಬೈ: ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ಅನೇಕ ತಾರೆಯರು ಆಧ್ಯಾತ್ಮಿಕತೆಯ ಹಾದಿಯನ್ನು ಆರಿಸಿಕೊಳ್ಳುತ್ತಿದ್ದಾರೆ. ನಟಿಯರಾದ ಬರ್ಖಾ ಮದನ್ ಮತ್ತು ನೂಪುರ್ ಅಲಂಕಾರ್ ಅವರು ಸಿನಿ ಜೀವನದ ಉತ್ತುಂಗದಲ್ಲಿ ಇರುವಾಗಲೇ ಸನ್ಯಾಸಿ ಜೀವನಶೈಲಿಯನ್ನು ಅರಸಿ ಸಿನಿ ಉದ್ಯಮವನ್ನೇ ತೊರೆದರು. ಈ ಪಟ್ಟಿಗೆ ನಟಿ ಸೋಫಿಯಾ ಹಯಾತ್ ( Sofia Hayat ) ಕೂಡ ಸೇರ್ಪಡೆಯಾಗಿದ್ದರು. ಕ್ರೈಸ್ತ ಸನ್ಯಾಸಿನಿ ಆಗಿದ್ದ ಸೋಫಿಯಾ ಅವರ ಮೂಲ ಪಾಕಿಸ್ತಾನ. ಪ್ರಸ್ತುತ ಈಕೆ ಬ್ರಿಟಿಷ್​ ಪ್ರಜೆ. ಬಿಗ್​ಬಾಸ್ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಅವರೊಂದಿಗೆ ಡೇಟಿಂಗ್ ಮಾಡುವ ಮೂಲಕ ಹಿಂದೊಮ್ಮೆ ಬಹಳ ಸುದ್ದಿಯಲ್ಲಿದ್ದರು.

Sofia Hayat 2

1974ರಲ್ಲಿ ಯುನೈಟೆಡ್​ ಕಿಂಗ್​ಡಮ್​ನ ಕೆಂಟ್‌ನಲ್ಲಿರುವ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸೋಫಿಯಾ, ಬ್ರೈಟನ್ ವಿಶ್ವವಿದ್ಯಾಲಯದಿಂದ ಪ್ರದರ್ಶನ ಕಲೆಯಲ್ಲಿ ಬಿಎ ಪದವಿ ಪಡೆದಿದ್ದಾರೆ. ಸೋಫಿಯಾ ತನ್ನ ಆತ್ಮಚರಿತ್ರೆ 'ಡಿಶ್​ಹಾರ್ನಡ್​ ಹೌ ಐ ಎಸ್ಕೇಪ್ಡ್ ಆನ್ ಅರೇಂಜ್ಡ್ ಮ್ಯಾರೇಜ್ ಅಂಡ್ ಸರ್ವೈವ್ಡ್ ಆನ್ ಹಾನರ್ ಕಿಲ್ಲಿಂಗ್ ಟು ಬಿಕಮ್ ಎ ಸ್ಟಾರ್' ಎಂಬ ಪುಸ್ತಕದಲ್ಲಿ ಸಂಪ್ರದಾಯವಾದಿ ಕುಟುಂಬದಲ್ಲಿ ಬೆಳೆಯುವ ಕಷ್ಟಗಳ ಬಗ್ಗೆ ಸೋಫಿಯಾ ಮುಕ್ತವಾಗಿ ಮಾತನಾಡಿದ್ದಾರೆ.

ಈ ಆತ್ಮಚರಿತ್ರೆಯು ಸೋಫಿಯಾ, ಚಿಕ್ಕ ವಯಸ್ಸಿನಲ್ಲಿ ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗಬೇಕಾಯಿತು ಎಂಬುದನ್ನು ತಿಳಿಸುತ್ತದೆ. ಅಲ್ಲದೆ, ಆಕೆಯ ಭಾರತದ ಭೇಟಿ ಮತ್ತು ಆಕಸ್ಮಿಕವಾಗಿ ಬಾಲಿವುಡ್ ಪ್ರವೇಶ ಪಡೆದ ಬಗ್ಗೆ ಬೆಳಕು ಚೆಲ್ಲುತ್ತದೆ. ಅಂದಹಾಗೆ ಸೋಫಿಯಾ, ಬ್ರಿಟಿಷ್ ಹಾಸ್ಯ ಕಾರ್ಯಕ್ರಮ "ಆಬ್ಸಲೂಟ್​ ಪವರ್​" ಮೂಲಕ ಹೋಸ್ಟ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದರು. 2008ರಲ್ಲಿ ಅವರು ಇಂಗ್ಲಿಷ್ ಚಲನಚಿತ್ರ 'ಕ್ಯಾಶ್ ಅಂಡ್ ಕರ್ರಿ' ಮೂಲಕ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದರು.

2012 ರಲ್ಲಿ ಬಿಡುಗಡೆಯಾದ ‘ಡೈರಿ ಆಫ್ ಎ ಬಟರ್‌ಫ್ಲೈ’ ಮೂಲಕ ಬಾಲಿವುಡ್​ ಪ್ರವೇಶ ಮಾಡಿದರು. ನಾಚ್ಲೆ ಲಂಡನ್, ಸಿಕ್ಸ್ ಎಕ್ಸ್ ಮತ್ತು ಅಕ್ಸರ್ 2, ಸೋಫಿಯಾ ಅವರ ಕೆಲವು ಪ್ರಮುಖ ಹಿಂದಿ ಚಲನಚಿತ್ರಗಳಾಗಿವೆ. 2013ರಲ್ಲಿ ಬ್ರಿಟಿಷ್ ನಿಯತಕಾಲಿಕೆ FHM ನಲ್ಲಿ ಸೋಫಿಯಾ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದರು. ಈ ಪಟ್ಟಿಯಲ್ಲಿ 81ನೇ ಸ್ಥಾನದಲ್ಲಿದ್ದರು.

ಸಲ್ಮಾನ್ ಖಾನ್ ಹೋಸ್ಟ್ ಮಾಡಿದ ಬಿಗ್​ಬಾಸ್​ನ ಏಳನೇ ಸೀಸನ್​ನಲ್ಲಿ ಸೋಫಿಯಾ ಭಾಗವಹಿಸಿದ್ದರು ಆದರೆ, ಕಾರ್ಯಕ್ರಮದ 12ನೇ ವಾರದಲ್ಲಿ ಎಲಿಮಿನೇಟ್​ ಆಗಿದ್ದರು. ಈ ಸಮಯದಲ್ಲಿ ಸೋಫಿಯಾ ಟೀಮ್​ ಇಂಡಿಯಾ ಸ್ಟಾರ್​ ಕ್ರಿಕೆಟಿಗ ರೋಹಿತ್ ಶರ್ಮ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿತ್ತು. ಅಲ್ಲದೆ, ಸೋಫಿಯಾ ಕೂಡ ಈ ವದಂತಿಗಳನ್ನು ನಿಜವೆಂದು ಒಪ್ಪಿಕೊಂಡರು ಮತ್ತು ಶೀಘ್ರದಲ್ಲೇ ತಮ್ಮ ಬ್ರೇಕಪ್ ವಿಚಾರವನ್ನೂ ಆಗಿನ ಟ್ವಿಟರ್​ ಖಾತೆ ಮೂಲಕ ದೃಢಪಡಿಸಿದ್ದರು.

Sofia Hayat 1

ಇನ್ನು 2016ರಲ್ಲಿ ಮಾಜಿ ಬ್ರಿಟಿಷ್ ಹೋಸ್ಟ್ ಆಧ್ಯಾತ್ಮಿಕತೆಯನ್ನು ಸ್ವೀಕರಿಸಲು ನಿರ್ಧರಿಸಿದರು. ಬಳಿಕ ಮದರ್ ಜಿಯಾ ಸೋಫಿಯಾ ಎಂದು ಮರುನಾಮಕರಣ ಮಾಡಿಕೊಂಡರು. ಇದಾದ ಕೆಲವೇ ಸಮಯದಲ್ಲಿ ಸೋಫಿಯಾ ಆಧ್ಯಾತ್ಮಿಕ ಜೀವನವನ್ನು ತೊರೆದು ಮತ್ತೆ ಗ್ಲಾಮರಸ್​ ಲೋಕ್ಕಕೆ ಮರಳಿದ್ದಾರೆ. ಈಕೆ ಗಾಯಕಿಯು ಹೌದು. ತಮ್ಮ ಇನ್​ಸ್ಟಾಗ್ರಾಂನಲ್ಲಿ 7 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ಗ್ಲಾಮರಸ್​ ಫೋಟೋ ಮತ್ತು ವಿಡಿಯೋಗಳಿಂದಲೇ ಆಗಾಗ ಸುದ್ದಿಯಲ್ಲಿರುತ್ತಾರೆ. ಈಕೆ ಬಿ- ಗ್ರೇಡ್​ ಮಹಿಳೆ ಎಂಬ ಕುಖ್ಯಾತಿಯನ್ನು ಗಳಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net