

‘ಜನತಾ ಕರ್ಫ್ಯೂ’ಗೆ ‘ರಾಜತ್ರಯ’ರ ಬೆಂಬಲ
ವೈದ್ಯರಿಗೆ ಪುನೀತ್ ಪವರ್
ಕರೊನಾದಂಥ ಸಾಂಕ್ರಾಮಿಕ ಮಹಾಮಾರಿ ಎಗ್ಗಿಲ್ಲದೆ ವ್ಯಾಪಿಸುತ್ತಿದ್ದರೂ ತಮ್ಮ ಜೀವದ ಹಂಗು ತೊರೆದು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ನಿಮಗಾಗಿ ನಾವು ಕೆಲಸದಲ್ಲಿದ್ದೇವೆ, ನಮಗಾಗಿ ನೀವು ಮನೆಯಲ್ಲೇ ಇರಿ’ ಎಂದು ಕರೊನಾ ಸೋಂಕಿತ ಹಾಗೂ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಹಲವಾರು ವೈದ್ಯರೂ ಕೋರಿಕೊಂಡಿದ್ದಾರೆ. ಅಂಥ ವೈದ್ಯರಿಗೆ ಈಗ ಚಿತ್ರರಂಗದಿಂದಲೂ ‘ಪವರ್’ ಸಿಗುತ್ತಿದೆ. ರಿಸ್ಕ್ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿರುವ ವೈದ್ಯರ ಪರವಾಗಿ ಪವರ್ ಸ್ಟಾರ್ ಪುನೀತ್ ರಾಜಕಮಾರ್ ್ಪ್ಟಡಟಛಟ್ಚಠಿಟ್ಟಠ ಎಂಬ ಚಾಲೆಂಜ್ ಆರಂಭಿಸಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿರುವ ಎಲ್ಲರೂ ಕರೊನಾ ‘ಯೋಧ’ರಂತೆ, ಅವರನ್ನು ನಾವೆಲ್ಲ ಒಗ್ಗಟ್ಟಿನಿಂದ ಬೆಂಬಲಿಸೋಣ. ಸಾಂಕ್ರಾಮಿಕವಾಗಿರುವ ಕರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ಅವರಿಗೇ ಅಪಾಯ ಹೆಚ್ಚು. ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಈ ಹ್ಯಾಷ್ಟ್ಯಾಗ್ ಹಂಚಿಕೊಳ್ಳಿ’ ಎಂಬುದಾಗಿ ಪುನೀತ್ ರಾಜಕುಮಾರ್ ಕೋರಿದ್ದಾರೆ. ಇದನ್ನು ನಟ ಧನಂಜಯ್ ಹಂಚಿಕೊಂಡಿದ್ದಾರೆ. ಜತೆಗೆ ಪುನೀತ್ ಅವರ ಅಭಿಮಾನಿಗಳೂ ಚಾಲೆಂಜ್ಗೆ ಕೈಜೋಡಿಸಿ, ವೈದ್ಯರಿಗೆ ನೈತಿಕ ಬೆಂಬಲ ಸೂಚಿಸಿದ್ದಾರೆ.
ಹರ್ಷಿಕಾ ಕ್ಲೀನ್ ಹ್ಯಾಂಡ್ ಚಾಲೆಂಜ್
ನಾವೂ- ನೀವೂ ಕೈಜೋಡಿಸೋಣ
ಮದುವೆ ವಾರ್ಷಿಕೋತ್ಸವ ಆಚರಿಸಲ್ಲ
ಕಾರ್ವಿುಕ ನಿಧಿ ಸ್ಥಾಪನೆ ಆಗಲಿ
ಮನೆಯಲ್ಲೇ ರಶ್ಮಿಕಾ ವರ್ಕೌಟ್
ರಿಷಬ್ ಶೆಟ್ಟಿ ವರ್ಕ್ ಫ್ರಮ್ ಹೋಮ್
ಡೈನಿಂಗ್ ‘ಟೇಬಲ್’ ಮೇಲೆ ಗಣೇಶ್ ‘ಟೆನಿಸ್’
ನಡುವೆ ಅಂತರವಿರಲಿ
ಜನತಾ ಕರ್ಫ್ಯೂ ಬಗ್ಗೆ ಹಲವು ಬಾಲಿವುಡ್ ನಟ-ನಟಿಯರು ತಮ್ಮ ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಎಲ್ಲಾ ಚಿತ್ರಗಳ ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ ಕಲಾವಿದರು ಪುರುಸೊತ್ತಿನಲ್ಲಿರುವುದಷ್ಟೇ ಅಲ್ಲ, ಮನೆಯಲ್ಲೇ ಬಂಧಿಯಾಗಿದ್ದಾರೆ. ಸಿಕ್ಕಿರುವ ಅಮೂಲ್ಯ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದಕ್ಕೆ ಬಹಳಷ್ಟು ಸೆಲೆಬ್ರಿಟಿಗಳು ಮುಂದಾಗಿದ್ದು, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ಗಳನ್ನು ಕೊಡುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ತಮ್ಮ ಸಮಯವನ್ನು ತಮ್ಮ ಮುದ್ದಿನ ನಾಯಿಯೊಂದಿಗೆ ಕಳೆಯುತ್ತಿದ್ದು, ನಾಯಿಯೊಂದಿಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ಇಂಥ ಸಂದರ್ಭದಲ್ಲಿ ಮನೆಯಲ್ಲಿರುವುದು ಹೆಚ್ಚು ಸುರಕ್ಷಿತ’ ಎಂದು ಬರೆದುಕೊಂಡಿದ್ದಾರೆ. ಪ್ರಿಯಾಂಕಾರ ಸಮೀಪದ ಪ್ರತಿಸ್ಪರ್ಧಿ ಎಂದೇ ಯಾವಾಗಲೂ ಬಿಂಬಿತರಾಗುವ ದೀಪಿಕಾ ಪಡುಕೋಣೆ ಸಹ ಇದರಿಂದ ಹೊರತಲ್ಲ. ಅವರು ತಮ್ಮ ಸಮಯವನ್ನು ವಾರ್ಡ್ರೋಬ್ ಕ್ಲೀನ್ ಮಾಡುವುದಕ್ಕೆ ಮೀಸಲಿಟ್ಟಿದ್ದಾರೆ. ಇನ್ಸ್ಟಾಗ್ರಾಮ್ಲ್ಲಿ ಒಂದು ಫೋಟೋ ಹಂಚಿಕೊಂಡಿರುವ ಅವರು, ‘ಕ್ಲೀನಿಂಗ್ ವಾರ್ಡ್ರೋಬ್’ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಇನ್ನು, ಅಪ್ಪಟ ಪುಸ್ತಕಪ್ರೇಮಿಯಾಗಿರುವ ಸೈಫ್ ಅಲಿ ಖಾನ್, ಎಲ್ಲರಿಂದ ದೂರವಾಗಿ ಪುಸ್ತಕದಲ್ಲಿ ಕಳೆದು ಹೋಗಿದ್ದಾರೆ. ಅಲಿಯಾ ಭಟ್ ಸಹ ಪುಸ್ತಕ ಕೈಗೆತ್ತಿಕೊಂಡಿದ್ದು, ‘ಮನೆಯಲ್ಲೇ ಇದ್ದು ಪುಸ್ತಕ ಓದಿ’ ಎಂದು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.
ಜನತಾ ಕರ್ಫ್ಯೂಗೆ ಜೈ
ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂ ಕುರಿತು ಬಾಲಿವುಡ್ನಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಹಿಂದಿ ಚಿತ್ರರಂಗದ ಅನೇಕ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಬೆಂಬಲ ಸೂಚಿಸುವುದರ ಜತೆಗೆ, ಸಹಕರಿಸುವಂತೆ ಎಲ್ಲರಿಗೂ ಮನವಿ ಮಾಡಿದ್ದಾರೆ. ಪ್ರಮುಖವಾಗಿ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿ, ಇಂಥದ್ದೊಂದು ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಶಾರುಖ್ ಖಾನ್, ಶಬಾನಾ ಆಜ್ಮಿ, ಅಕ್ಷಯ್ ಕುಮಾರ್, ಅನುಪಮ್ ಖೇರ್, ಅನುಷ್ಕಾ ಶರ್ಮ, ವರುಣ್ ಧವನ್, ಕರಣ್ ಜೋಹರ್, ಶಿಲ್ಪಾ ಶೆಟ್ಟಿ, ಮಾಧವನ್ ಮುಂತಾದವರು ಈ ಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಾ. 22ರಂದು ನಡೆಯಲಿರುವ ಜನತಾ ಕರ್ಫ್ಯೂಗೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಮಾರಕ ಕಾಯಿಲೆಯನ್ನು ತಡೆಯುವುದಕ್ಕೆ ಸತತವಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು. | ಅಮಿತಾಭ್ ಬಚ್ಚನ್ ಬೇರೆಯವರ ಜತೆ ಸಂವಹನ ಕಡಿಮೆ ಮಾಡುವುದು ಉತ್ತಮ. ಈ ನಿಟ್ಟಿನಲ್ಲಿ ಜನತಾ ಕರ್ಫ್ಯೂ ಒಂದು ಒಳ್ಳೆಯ ಕ್ರಮ. ಇದನ್ನು ಇನ್ನಷ್ಟು ಮುಂದುವರಿಸುವ ಅವಶ್ಯಕತೆ ಇದೆ. ಹರಡುತ್ತಿರುವ ವೈರಸ್ ಕಟ್ಟಿಹಾಕುವ ಅಗತ್ಯವಿದೆ. | ಶಾರುಖ್ ಖಾನ್ ಇದು ನಾನ್ಸೆನ್ಸ್ ಅಲ್ಲ. ಎಲ್ಲ ಭಾರತೀಯರನ್ನು ಒಂದು ಮಾಡುವ ಮಾಸ್ಟರ್ ಸ್ಟ್ರೋಕ್. | ಶಬಾನಾ ಆಜ್ಮಿ ಜನತಾ ಕರ್ಫ್ಯೂ ಫಾಲೋ ಮಾಡುವುದರ ಮೂಲಕ ಎಲ್ಲರೂ ಸ್ವಯಂ ಕರ್ಫ್ಯೂ ಹಾಕಿಕೊಳ್ಳಬೇಕು. ವೈರಸ್ ಹರಡುವುದನ್ನು ತಡೆಗಟ್ಟಬೇಕು. | ಅನುಷ್ಕಾ ಶರ್ಮ ಜನತಾ ಕರ್ಫ್ಯೂಗೆ ಎಲ್ಲರೂ ಸಹಕಾರ ನೀಡುವುದರ ಜತೆಗೆ, ಮಾ.22ರಂದು ಸಂಜೆ ಐದಕ್ಕೆ, ಎಲ್ಲರ ಆರೋಗ್ಯಕ್ಕಾಗಿ ಸತತವಾಗಿ ಶ್ರಮಿಸುತ್ತಿರುವ ಜನರಿಗೆ ನಮ್ಮ ಅಭಿನಂದನೆ ಸಲ್ಲಿಸೋಣ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ, ಎಲ್ಲರೂ ಸುರಕ್ಷಿತವಾಗಿರಿ. | ಸಂಜಯ್ ದತ್ ಇದೇ ಭಾನುವಾರ ಬೆಳಗ್ಗೆ ಏಳರಿಂದ ರಾತ್ರಿ ಒಂಬತ್ತರವರೆಗೆ ಜನತಾ ಕರ್ಫ್ಯೂ ಪಾಲಿಸುವುದರ ಮೂಲಕ ಇಡೀ ಜಗತ್ತಿಗೇ ನಾವು ಒಗ್ಗಟ್ಟಾಗಿದ್ದೇವೆ ಎಂದು ತೋರಿಸಬೇಕಿದೆ. | ಅಕ್ಷಯ್ ಕುಮಾರ್