ಬರ್ಬರಿಕ ಚಿತ್ರೀಕರಣ ಪೂರ್ಣ; ಕಿರುತೆರೆ ನಟ ಸ್ಕಂದ ಅಶೋಕ್, ಸಿರಿ ರಾಜು ನಟಿಸಿರುವ ಚಿತ್ರ

barbarika
Published on

ಬೆಂಗಳೂರು: ಪೌರಾಣಿಕ ಪಾತ್ರಗಳ ಹೆಸರುಗಳನ್ನೇ ಸಿನಿಮಾ ಟೈಟಲ್ ಮಾಡಿಕೊಂಡಿರುವ ಹತ್ತಾರು ಉದಾಹರಣೆಗಳಿವೆ. ಅದೇ ಸಾಲಿಗೆ ಸೇರುವ ಚಿತ್ರ ‘ಬರ್ಬರಿಕ’. ಅಂದಹಾಗೆ, ‘ಬರ್ಬರಿಕ’ ಭೀಮನ ಮೊಮ್ಮಗ. ಆತ ಸೋಲಿಲ್ಲದ ಸರದಾರ. ಎಂತಹ ಯುದ್ದವನ್ನೂ ಗೆಲ್ಲುವ ಶಕ್ತಿ ಆತನಿಗಿರುತ್ತದೆ. ಅದೇ ಹೆಸರಿನ ಈ ಚಿತ್ರ ಇತ್ತೀಚೆಗಷ್ಟೆ ಸದ್ದಿಲ್ಲದೇ ಶೂಟಿಂಗ್ ಪೂರ್ಣಗೊಳಿಸಿದೆ.

‘‘ಬರ್ಬರಿಕ’ನಿಗೂ ನಾಯಕನಿಗೂ ಲಿಂಕ್ ಇರುವ ಕಾರಣ ಚಿತ್ರಕ್ಕೆ ಆ ಶೀರ್ಷಿಕೆ ಇಟ್ಟಿದ್ದೇವೆ. ಲಿಂಕ್ ಏನು? ಎಂದು ತಿಳಿಯಲು ಸಿನಿಮಾ ನೋಡಿ’ ಎನ್ನುತ್ತಾರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಶಾಂಡಿಲ್ಯ. ಹಣದ ಸಮಸ್ಯೆ ಎದುರಾಗಿ ಸುಪಾರಿ ಕಿಲ್ಲರ್ ಆಗುವ ನಾಯಕನ ಪಾತ್ರದಲ್ಲಿ ಕಿರುತೆರೆ ನಟ ಸ್ಕಂದ ಅಶೋಕ್, ಮಧ್ಯವರ್ಗದ ಹುಡುಗಿಯಾಗಿ ಗ್ಲಾಮರ್ ಲುಕ್‌ನಲ್ಲಿ ನಾಯಕಿ ಸಿರಿ ರಾಜು ಕಾಣಿಸಿಕೊಳ್ಳಲಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿಯ ಬಿ.ಎಂ. ವೆಂಕಟೇಶ್, ಬಾಲರಾಜವಾಡಿ, ಯಮುನಾ ಶ್ರೀನಿಧಿ, ಚಿರಾಗ್, ಮಡಿವಾಳಯ್ಯ, ಕಾವ್ಯ, ಶೈಲೇಶ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಎ.ಟಿ. ರವೀಶ್ ಸಂಗೀತ, ಇಂದ್ರಜಿತ್ ಛಾಯಾಗ್ರಹಣ, ಉದಯ್ ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net