ಗಾಯಕ ಎಸ್​​​.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

SPB
Published on

ಚೆನ್ನೈ: ಖ್ಯಾತ ಗಾಯಕ ಎಸ್​.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಸ್ವಲ್ಪವೂ ಸುಧಾರಣೆ ಕಂಡುಬಂದಿಲ್ಲ. ಗಂಭೀರ ಸ್ಥಿತಿಯಲ್ಲಿಯೇ ಮುಂದುವರಿದಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಚೆನ್ನೈನ ಎಂಜಿಎಂ ಆಸ್ಪತ್ರೆ ಹೆಲ್ತ್​ ಬುಲೆಟಿನ್​​ನಲ್ಲಿ ತಿಳಿಸಿದೆ.

ಎಸ್​ಪಿಬಿ ಅವರು ಇನ್ನೂ ವೆಂಟಿಲೇಟರ್​ ಸಹಾಯದಲ್ಲಿಯೇ ಇದ್ದಾರೆ. ತಜ್ಞರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಮಾಹಿತಿ ನೀಡಿದೆ.

ದೇಶದ ಕೆಲವು ತಜ್ಞರು ಮಾತ್ರವಲ್ಲ, ವಿದೇಶಗಳ ಖ್ಯಾತ ತಜ್ಞ ವೈದ್ಯರ ಸಲಹೆಯನ್ನೂ ಪಡೆದು ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರಲ್ಲಿ ಕಿಂಚಿತ್ತೂ ಸುಧಾರಣೆ ಕಾಣುತ್ತಿಲ್ಲ ಎಂದು ಹೆಲ್ತ್​ಬುಲೆಟಿನ್​​ನಲ್ಲಿ ಉಲ್ಲೇಖಿಸಿದೆ.

ಈ ಮಧ್ಯೆ ದೇಶಾದ್ಯಂತ ಅನೇಕ ಅಭಿಮಾನಿಗಳು ಎಸ್​ಪಿಬಿ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net