

2 ನೇ ಪತಿ ಗೌತಮ್ ಹತಿರಾಮಣಿಗೆ ಡಿವೋರ್ಸ್ ಕೊಟ್ಟ ಗಾಯಕಿ ಕನಿಕಾ
ಸಾಕಷ್ಟು ಯೋಚಿಸಿ.. ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಪೋಸ್ಟ್
ಪ್ರೀತಿಸಿ..ಮದುವೆಯಾಗಿದ್ದ ಗೌತಮ್ ಹತಿರಾಮಣಿ ಮತ್ತು ಕನಿಕಾ, 4 ವರ್ಷದ ದಾಂಪತ್ಯ ಅಂತ್ಯ
Singer Kanika Kapoor Announces Separation From Husband:'ಸಾಕಷ್ಟು ಯೋಚಿಸಿ.. ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ನಾನು ಮತ್ತು ನನ್ನ ಪತಿ ಬೇರ್ಪಡಲು ನಿರ್ಧರಿಸಿದ್ದೇವೆ, ನಮ್ಮ ಹಾದಿ ಬೇರೆ ಬೇರೆ. ಒಟ್ಟಾಗಿ ಕಳೆದ ಕ್ಷಣದ ಬಗ್ಗೆ ನಾನು ಕೃತಜ್ಞಳಾಗಿದ್ದೇನೆ . ಅವೆ ಭವಿಷ್ಯ ಅದ್ಭುತವಾಗಿರಲಿ ಎಂದು ನಾನು ಬಯಸುತ್ತೇನೆ ಎಂದು ಬೇಬಿಡಾಲ್ ಖ್ಯಾತಿಯ ಸಿಂಗರ್ ಕನಿಕಾ ಕಪೂರ್ ಬರೆದುಕೊಂಡಿದ್ದು, ತಮ್ಮ ಎರಡನೇ ಪತಿಯಿಂದ ಡಿವೋರ್ಸ್ ಪಡೆದುಕೊಂಡ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
2022ರಲ್ಲಿ ಕನಿಕಾ ಕಪೂರ್ ಅವರು, ಗೌತಮ್ ಹತಿರಾಮಣಿ ಅವರನ್ನು ಮದುವೆಯಾಗಿದ್ದರು. ಇಬ್ಬರ ಹಾದಿ ಬೇರೆಯದ್ದಾಗಿದೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಾವು ಡಿವೋರ್ಸ್ ಕೊಟ್ಟಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಕನಿಕಾ ಕಪೂರ್ ಅವರು ಈ ಹಿಂದೆ 1999ರಲ್ಲಿ ತಮ್ಮ 18ನೇ ವರ್ಷದಲ್ಲಿ ರಾಜ್ ಚಂದೋಕ್ ಎಂಬುವವರನ್ನು ಮದುವೆಯಾಗಿ ಲಂಡನ್ನಲ್ಲಿ ಇದ್ದರು. 2012ರಲ್ಲಿ ಅವರಿಂದ ಡಿವೋರ್ಸ್ ಪಡೆದುಕೊಂಡರು. ಅವರಿಗೆ ಆಯನಾ ಮತ್ತು ಸಮರಾ, ಯುವರಾಜ್ ಎನ್ನುವ ಹೆಸರಿನ ಮಕ್ಕಳಿದ್ದಾರೆ.
ಗೌತಮ್ ಅವರು ಕನಿಕಾ ಅವರಿಗೆ 15 ವರ್ಷಗಳ ಪರಿಚಯ. ಪ್ರೇಮ ಸಂಬಂಧಕ್ಕೆ ಬರುವ ಮೊದಲು ಅವರು ಆಪ್ತ ಸ್ನೇಹಿತರಾಗಿದ್ದರು ಈ ಬಗ್ಗೆ ಕನಿಕಾ ಅವರೇ ಹೇಳಿಕೊಂಡಿದ್ದರು. ತಾವೇ ಸ್ವತಃ ಗೌತಮ್ಗೆ ಎರಡು ಬಾರಿ - ಮೊದಲಿಗೆ 2014ರಲ್ಲಿ ಮತ್ತು ನಂತರ 2020ರಲ್ಲಿ - ಮದುವೆಯಾಗುವಂತೆ ಪ್ರಸ್ತಾಪಿಸಿದ್ದ ಬಗ್ಗೆ ಬಹಿರಂಗ ಪಡಿಸಿದ್ದರು. 2022ರಲ್ಲಿ ಲಂಡನ್ನಲ್ಲಿ ಉದ್ಯಮಿ ಗೌತಮ್ ಹತಿರಾಮಣಿ ಅವರನ್ನು ಮದುವೆಯಾದರು. ಈ ವೇಳೆ ಕನಿಕಾ ಮಕ್ಕಳಾದ ಆಯನಾ ಮತ್ತು ಸಮರಾ, ಯುವರಾಜ್ ಸಹ ಭಾಗಿಯಾಗಿ ಸಂಭ್ರಮಿಸಿದ್ದರು. ಆದರೆ, ಈಗ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ಅಂತ್ಯವಾಡಿದ್ದಾರೆ. ಈ ಬಗ್ಗೆ ಕನಿಕಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ದೃಢಪಡಿಸಿದ್ದಾರೆ.
ಸಾಕಷ್ಟು ಆಲೋಚನೆ ಮಾಡಿದ ನಂತರ ನನ್ನ ಪತಿ ನಾನು ಬೇರ್ಪಡಲು ನಿರ್ಧರಿಸಿದ್ದೇವೆ,. ಅವರೊಟ್ಟಿಗೆ ಕಳೆದ ಕ್ಷಣ..ಸಮಯಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ನಮ್ಮ ಹಾದಿಗಳು ಬೇರೆ. ಅವರ ಭವಿಷ್ಯವು ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ. ನಾವು ಜೀವನದ ಮುಂದಿನ ಹಂತಕ್ಕೆ ಸಾಗುತ್ತಿರುವಾಗ ನಮ್ಮ ಖಾಸಗಿ ಜೀವನವನ್ನು ಗೌರವಿಸಿ ಎಂದು ಬರೆದುಕೊಂಡಿದ್ದಾರೆ.
2014ರಲ್ಲಿ ಬಿಡುಗಡೆಯಾದ ಸನ್ನಿ ಲಿಯೋನ್ ಅಭಿನಯದ 'ರಾಗಿಣಿ ಎಂಎಂಎಸ್ 2' ಚಿತ್ರದ 'ಬೇಬಿ ಡಾಲ್' ಹಾಡಿನ ಮೂಲಕ ಕನಿಕಾ ಕಪೂರ್ ಖ್ಯಾತಿ ಪಡೆದರು. 'ಮೀಟ್ ಬ್ರೋಸ್' ಸಂಯೋಜಿಸಿದ ಈ ಹಾಡು ಭಾರಿ ಜನಪ್ರಿಯತೆ ಗಳಿಸಿತು ಮತ್ತು ಕನಿಕಾ ಅವರನ್ನು ಜನಪ್ರಿಯ ಹಿನ್ನೆಲೆ ಗಾಯಕಿಯನ್ನಾಗಿ ನೆಲೆಗೊಳಿಸಿತು. ಅದೇ ವರ್ಷ ಬಿಡುಗಡೆಯಾದ, ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಹ್ಯಾಪಿ ನ್ಯೂಯರ್' ಚಿತ್ರದ 'ಲವ್ಲಿ' ಹಾಡು ಕೂಡ ಅವರ ಹಿಟ್ ಹಾಡುಗಳ ಪಟ್ಟಿಯಲ್ಲಿದೆ, (ಏಜೆನ್ಸೀಸ್).