

ಈ ಸುದ್ದಿ ಆರು ತಿಂಗಳುಗಳಿಂದ ಕೇಳಿಬರುತ್ತಲೇ ಇತ್ತು. ಆದರೆ, ಚಿತ್ರತಂಡದವರಾಗಲೀ, ಶ್ರುತಿ ಹಾಸನ್ ಆಗಲೀ, ಈ ಕುರಿತು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಹಾಗಾಗಿ, ಶ್ರುತಿ ಚಿತ್ರದಲ್ಲಿ ನಟಿಸುತ್ತಾರೋ? ಇಲ್ಲವೋ? ಎಂಬ ಗೊಂದಲ ಮುಂದುವರೆದೇ ಇತ್ತು. ಈಗ ಎಲ್ಲವೂ ಅಂತಿಮವಾಗಿದ್ದು, ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದ ನಾಯಕಿಯಾಗಿ ಶ್ರುತಿ ಹಾಸನ್ ಆಯ್ಕೆಯಾಗಿದ್ದಾರೆ.
ಗೋಪಿಚಂದ್ ಮಲ್ಲಿನೇನಿ ನಿರ್ದೇಶನದ ‘ಬಲುಪು’ ಮತ್ತು ‘ಕ್ರ್ಯಾಕ್’ ಚಿತ್ರಗಳಲ್ಲಿ ಶ್ರುತಿ ನಟಿಸಿದ್ದರು. ಎರಡೂ ಚಿತ್ರಗಳು ಹಿಟ್ ಆಗಿದ್ದವು. ಈ ಚಿತ್ರದಲ್ಲೂ ಶ್ರುತಿ ಹಾಸನ್ ನಾಯಕಿಯಾಗಲಿ ಎಂಬುದು ಗೋಪಿಚಂದ್ ಆಸೆಯಾಗಿತ್ತಂತೆ. ಆದರೆ, ಬಾಲಕೃಷ್ಣರಂತಹ ಹಿರಿಯ ನಟರಿಗೆ ನಾಯಕಿಯಾಗಿ ನಟಿಸಿದರೆ ಯಾರು, ಏನನ್ನುತ್ತಾರೋ ಎಂಬ ಅಳುಕು ಶ್ರುತಿಗೆ. ಮೇಲಿಂದ ಮೇಲೆ ಚಿತ್ರ ಒಪು್ಪವುದಕ್ಕೆ ಫೋನ್ ಬರುತ್ತಿದ್ದರೂ, ತಕ್ಷಣ ಒಪ್ಪದೆಯೇ, ಸಾಕಷ್ಟು ಯೋಚಿಸಿದರಂತೆ ಶ್ರುತಿ. ಕೊನೆಗೆ, ಚಿತ್ರದಲ್ಲಿ ನಟಿಸುವ ತೀರ್ವನಕ್ಕೆ ಅವರು ಬಂದಿದ್ದಾರೆ.