ಹಸ್ತಮೈಥುನ ದೃಶ್ಯದಲ್ಲಿ ನಟಿಸಲು ಶ್ರುತಿ ಹಾಸನ್ ರೆಡಿ?: ಯಾವ ಚಿತ್ರ ಎಂಬುದರ ಕುತೂಹಲಕರ ಮಾಹಿತಿ ಇಲ್ಲಿದೆ

Shurti Hassan
Published on

ಹೈದರಾಬಾದ್​: ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್​ ಬಾಬು ನಟನೆಯ "ಭರತ್​ ಅನೆ ನೇನು" ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ನೆಟಫ್ಲಿಕ್ಸ್​ನ "ಲಸ್ಟ್​ ಸ್ಟೋರಿ" ಚಿತ್ರದ ಮೂಲಕ ಮನೆ ಮಾತಾದವರು.

ತೆಲುಗಿನ ಹಿಟ್​​ ಚಿತ್ರ ಅರ್ಜುನ್​ ರೆಡ್ಡಿ ಹಿಂದಿ ರಿಮೇಕ್​ ಕಬೀರ್​ ಸಿಂಗ್​ ಚಿತ್ರದಲ್ಲೂ ಅದ್ಭುತ ನಟನೆಯ ಮೂಲಕ ಕಿಯಾರಾ ಬಹುಬೇಡಿಕೆಯ ನಟಿಯಾಗಿದ್ದಾರೆ. ಇದೀಗ ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ "ಲಸ್ಟ್​ ಸ್ಟೋರಿ" ತೆಲುಗು ರಿಮೇಕ್​ನಲ್ಲಿ ಕಿಯಾರಾ ಪಾತ್ರವನ್ನು ನಿರ್ವಹಿಸಲಿದ್ದಾರೆಂದು ತಿಳಿದುಬಂದಿದೆ.

ಹಿಂದಿ ಲಸ್ಟ್​ ಸ್ಟೋರಿ ಚಿತ್ರದಲ್ಲಿ ಹಸ್ತಮೈಥುನ ದೃಶ್ಯದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಕಿಯಾರಾ ಸೈ ಎನಿಸಿಕೊಂಡಿದ್ದರು. ಹಾಗೆಯೇ ಚಿತ್ರದ ಕುರಿತು ಟೀಕೆಗಳು ವ್ಯಕ್ತವಾಗಿತ್ತು. ಆದರೆ, ಅಭಿನಯ ದೃಶ್ಟಿಯಿಂದ ನೋಡುವುದಾದರೆ ಕಿಯಾರಾ ಎಲ್ಲರ ಮನಗೆದ್ದಿದ್ದರು.

ಅಂದಹಾಗೆ ಲಸ್ಟ್​ ಚಿತ್ರದಲ್ಲಿ ಕಿಯಾರಾದ್ದು ಯುವ ಹೆಂಡತಿಯ ಪಾತ್ರ. ವ್ಯಕ್ತಿ (ವಿಕ್ಕಿ ಕುಶಾಲ್​)ಯೊಂದಿಗೆ ಅರೇಂಜ್​ ಮ್ಯಾರೇಜ್​ ಆಗುವ ಕಿಯಾರಾಳನ್ನು ಪತಿ ತುಂಬಾ ಪ್ರೀತಿಸುತ್ತಾನೆ. ಆದರೆ, ದೈಹಿಕ ಸಂಪರ್ಕ ವಿಷಯ ಬಂದಾಗ ಪತ್ನಿಗೆ ತೃಪ್ತಿಯಾಗುವುದಿಲ್ಲ. ಹೀಗಾಗಿ ತನ್ನನ್ನು ತಾನೇ ಸಂತೃಪ್ತಿಗೊಳಿಸಲು ಮುಂದಾಗುತ್ತಾಳೆ. ಈ ಮೂಲಕ ಇಡೀ ಕುಟುಂಬವನ್ನು ಪೇಚಿಗೆ ಸಿಲುಕಿಸುತ್ತಾಳೆ. ಇದು ಲಸ್ಟ್​ ಸ್ಟೋರಿ ಚಿತ್ರದ ಕತೆ.

ಇದೇ ಚಿತ್ರದ ತೆಲುಗು ಅವತರಣಿಕೆಯಲ್ಲಿ ಶ್ರುತಿ ಹಾಸನ್​ ನಟಿಸಲಿದ್ದಾರೆ ಎಂದು ಕೇಳಿಬಂದಿದೆ. ಚಿತ್ರವನ್ನು ನಿರ್ದೇಶಕರಾದ ತರುಣ್​ ಭಾಸ್ಕರ್​, ಸಂಕಲ್ಪ ರೆಡ್ಡಿ ಮತ್ತು ನಂದಿನಿ ರೆಡ್ಡಿ ನಿರ್ದೇಶಿಸಲಿದ್ದಾರೆ. ಕಿಯಾರಾ ಪಾತ್ರಕ್ಕೆ ಇದಕ್ಕೂ ಮುನ್ನ ಅಮಲಾ ಪೌಲ್​ ಮತ್ತು ಈಶಾ ರೆಬ್ಬಾ ಸೇರಿದಂತೆ ಕೆಲವು ನಟಿ ಹೆಸರು ಕೇಳಿಬಂದಿತ್ತು. ಆದರೆ, ಶ್ರುತಿ ಹಾಸನ್​ ಹೆಸರು ಕೇಳಿಬರುತ್ತಿದ್ದು, ನಟಿಸುವುದು ಪಕ್ಕಾ ಎನ್ನಲಾಗಿದ್ದರೂ, ಖಚಿತ ಮಾಹಿತಿಗಾಗಿ ಮುಂದಿನ ದಿನಗಳವರೆಗೆ ಕಾಯಲೇಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net