

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರಿಯಾ ಸರನ್ ಇದೀಗ ಎಸ್.ಎಸ್.ರಾಜಮೌಳಿ ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಬಹುಭಾಷಾ ಚಿತ್ರ ‘ಆರ್ಆರ್ಆರ್’ನಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ಗೆ ಜತೆಯಾಗಿ ಅಭಿನಯಿಸಲಿದ್ದಾರೆ. ಹೀಗೊಂದು ಸುದ್ದಿ ಹರಿದಾಡಿ ಭಾರಿ ಸದ್ದು ಮಾಡುತ್ತಿದೆ.
ಅಜಯ್ ಅಭಿನಯಿಸುತ್ತಿರುವ ಪಾತ್ರಕ್ಕೆ ನಾಯಕಿ ಆಗಿ ಶ್ರಿಯಾ ಪರ್ಫೆಕ್ಟ್ ಮ್ಯಾಚ್ ಆಗುತ್ತಾರಂತೆ. ಹೀಗಾಗಿ ಅವರನ್ನು ನಿರ್ದೇಶಕ ರಾಜಮೌಳಿ ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಹಿಂದೆ ರಾಜಮೌಳಿ ನಿರ್ದೇಶನದ ‘ಛತ್ರಪತಿ’ ಸಿನಿಮಾದಲ್ಲಿ ಶ್ರಿಯಾ ಅಭಿನಯಿಸಿದ್ದರು.
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ‘ಅರಸು’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಈ ಚೆಲುವೆ, ಬಳಿಕ ರೂಪಾ ಅಯ್ಯರ್ ನಿರ್ದೇಶನದ ‘ಚಂದ್ರ’ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡಿದ್ದರು.
ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ‘ಆರ್ಆರ್ಆರ್’, ಬ್ರಿಟಿಷ್ ಆಡಳಿತದಲ್ಲಿ ತೆಲುಗು ಬುಡಕಟ್ಟು ಸಮುದಾಯದ ಮುಖಂಡರಾಗಿದ್ದ ಅಲ್ಲೂರಿ ಸೀತಾರಾಮರಾಜು ಹಾಗೂ ಕೊಮರಾಮ್ ಭೀಮ್ ಅವರ ಕುರಿತ ಕಥೆ ಆಧಾರಿತ ಚಿತ್ರ. ರಾಮ್ರಣ್ ತೇಜ, ಜೂನಿಯರ್ ಎನ್ಟಿಆರ್, ಆಲಿಯಾ ಭಟ್ ಸೇರಿ ವಿದೇಶಿ ಕಲಾವಿದರೂ ಚಿತ್ರದಲ್ಲಿ ಅಭಿನಯಿಸಿದ್ದಾರೆ.