ಗಾಯಕಿ ಶ್ರೇಯ ಘೋಶಲ್ ಈಗ ಗಂಡು ಮಗುವಿನ ತಾಯಿ

shreya
Published on

ನವದೆಹಲಿ : ಜನಪ್ರಿಯ ಗಾಯಕಿ ಶ್ರೇಯ ಘೋಶಲ್​ ಅವರು ಇಂದು ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾವು ಮತ್ತು ಪತಿ ಶಿಲಾದಿತ್ಯ ಎಂ. ತಮ್ಮ ಮೊದಲ ಮಗುವನ್ನು ಆನಂದದಿಂದ ಸ್ವಾಗತಿಸಿರುವುದಾಗಿ ​ ಶ್ರೇಯ ಇನ್​​ಸ್ಟಾಗ್ರಾಂನಲ್ಲಿ ತಿಳಿಸಿದ್ದು, 'ಹಿಂದೆಂದೂ ಅನುಭವಿಸಿಲ್ಲದ ಭಾವನೆಗಳು ಹುಟ್ಟಿವೆ' ಎಂದಿದ್ದಾರೆ.

ಮಗುವಿನ ಆಗಮನದಿಂದ ನಮ್ಮ ಇಡೀ ಕುಟುಂಬ ಸಂತೋಷ ಹೊಂದಿದೆ. ಶುಭ ಹಾರೈಕೆಗಳನ್ನು ನೀಡಿರುವ ಎಲ್ಲರಿಗೂ ಧನ್ಯವಾದ ಎಂದು ಶ್ರೇಯ ಹೇಳಿದ್ದಾರೆ. ಈ ಶುಭಸಂದರ್ಭಕ್ಕೆ ಸಂಗೀತಲೋಕದ ಮತ್ತು ಸಿನಿಲೋಕದ ಹಲವರು ಶುಭಾಶಯ ಕೋರಿದ್ದರೆ, ಲಕ್ಷಾಂತರ ಅಭಿಮಾನಿಗಳು ಲೈಕುಗಳ ಸುರಿಮಳೆಗೈದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net