ನಯನತಾರಾ, ತಮನ್ನಾ ಹಿಂದಿಕ್ಕಿದ ಶ್ರದ್ಧಾ

sradda mar 20
Published on

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಶ್ರದ್ದಾ ಶ್ರೀನಾಥ್ ಕನ್ನಡ ಸಿನಿಮಾಗಳ ಜತೆಗೆ ಪರಭಾಷೆ ಚಿತ್ರಗಳಲ್ಲಿಯೂ ಬಿಜಿಯಾಗಿದ್ದಾರೆ. ಒಳ್ಳೊಳ್ಳೆಯ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡು, ಪ್ರಶಸ್ತಿ ಮೇಲೆ ಪ್ರಶಸ್ತಿ ಪಡೆದುಕೊಳ್ಳುತ್ತಿದ್ದಾರೆ. ಈಗ ‘ಜೆಎಫ್​ಡಬ್ಲ್ಯೂ ಅವಾರ್ಡ್ 2020’ (ಜಸ್ಟ್ ಫಾರ್ ವುಮನ್) ಕೊಡಮಾಡುವ ಅತ್ಯುತ್ತಮ ನಾಯಕಿ ಪಟ್ಟವೂ ಶ್ರದ್ಧಾ ಪಾಲಿಗೆ ಒಲಿದಿದೆ.

ಇತ್ತೀಗಷ್ಟೇ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆದ ‘ಜೆಎಫ್​ಡಬ್ಲ್ಯೂ ಅವಾರ್ಡ್ 2020’ ಕಾರ್ಯಕ್ರಮದಲ್ಲಿ ಶ್ರದ್ಧಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ನಯನತಾರಾ, ತಮನ್ನಾ ಭಾಟಿಯಾ, ಐಶ್ವರ್ಯಾ ರಾಜೇಶ್, ಮಂಜು ವಾರಿಯರ್ ಮತ್ತು ಶ್ರದ್ಧಾ ಶ್ರೀನಾಥ್ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದರು. ಆ ಪೈಕಿ ‘ನೇರ್ಕೆಂಡ ಪಾರವೈ’ ಚಿತ್ರದಲ್ಲಿನ ಅಭಿನಯಕ್ಕಾಗಿ ‘ಬೆಸ್ಟ್ಆಕ್ಟೆ ›ಸ್ ಇನ್ ಲೀಡ್’ ವಿಭಾಗದಲ್ಲಿ ಶ್ರದ್ಧಾ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.

ಅಂದಹಾಗೆ, ಬಾಲಿವುಡ್​ನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ಪಿಂಕ್’ ಚಿತ್ರವೇ ತಮಿಳಿನಲ್ಲಿ ‘ನೇರ್ಕೆಂಡ ಪಾರವೈ’ ಶೀರ್ಷಿಕೆಯಲ್ಲಿ ರಿಮೇಕ್ ಆಗಿತ್ತು. ಮೂಲ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ತಾಪ್ಸೀ ಪನ್ನು ಮಾಡಿದ್ದ ಪಾತ್ರವನ್ನು ತಮಿಳಿನಲ್ಲಿ ಅಜಿತ್ ಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್ ನಿಭಾಯಿಸಿದ್ದರು. ವಿಮರ್ಶೆ ದೃಷ್ಟಿಯಿಂದ ಮತ್ತು ಕಲೆಕ್ಷನ್ ವಿಚಾರದಲ್ಲಿ ಒಳ್ಳೇ ಕಮಾಯಿ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net