ಶ್ರದ್ಧಾ ಕಪೂರ್​ ಹಾಕಿರುವ ಈ ಬಿಕಿನಿ ರೇಟ್ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!

shradha bikani
shradha
Published on

ಮುಂಬೈ: ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದರಲ್ಲಿ ಸದಾ ಮುಂದು. ಸಾವಿರಾರು ಯುವಕರ ಹೃದಯ ಕದ್ದ ಈ ಚೋರಿ ತೆರೆಯ ಮುಂದೆ ಮಿಂಚಿದಂತೆ ತೆರೆಯ ಹಿಂದೆಯೂ ಯಾವಾಗಲೂ ಜಾಮ್ ಜೂಮ್ ಆಗಿ ಇರುತ್ತಾರೆ.

ಶ್ರದ್ಧಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಅವರ ಬಿಕಿನಿಯಿಂದ. ಹೌದು ಶ್ರದ್ಧಾ ಧರಿಸಿರುವ ಹೊಸ ಬಿಕಿನಿ ಇದೀಗ ಇಂಟರ್​ನೆಟ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಾಲ್ಡಿವ್ಸ್​ ಪ್ರವಾಸದಲ್ಲಿರುವ ಶೃದ್ಧಾ 25 ಸಾವಿರ ರೂಪಾಯಿಯ ಬಿಕಿನಿ ಧರಿಸಿ ಬೀಚ್ ಸುತ್ತಾಡಿದ್ದಾರೆ.

ಶಿವನ್ ನರೇಶ್ ಕಂಪನಿಯ ಡಿಸೈನ್​ನಲ್ಲಿ ಮೂಡಿಬಂದಿರುವ ಮೀರ ಮೀರನೇ ಮಿಂಚುವ ಕೆಂಪು ಬಣ್ಣದ ವೆಲವೆಟ್ ಬಿಕಿನಿಯನ್ನು ತೊಟ್ಟು ಶ್ರದ್ಧಾ ಸಕತ್ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೊವನ್ನು ನಮೃತಾ ದೀಪಕ್ ಎನ್ನುವರು ಹಂಚಿಕೊಂಡಿದ್ದು, ಡೌಟೇ ಇಲ್ಲ, ಶ್ರದ್ಧಾ ಅಪ್ಸರೆಯ ಹಾಗೇ ಈ ಬಿಕಿನಿಯಲ್ಲಿ ಕಾಣುತ್ತಿದ್ದಾಳೆ ಎಂದು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net