ಟೈಗರ್ ಶ್ರಾಫ್​​​ಗೆ ಮತ್ತೆ ಶ್ರದ್ಧಾ ಕಪೂರ್​ ಜೋಡಿ

Shraddha
Published on

ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್ ಈಗಾಗಲೇ ಒಟ್ಟಿಗೆ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ನಾಲ್ಕನೇ ಬಾರಿ ಒಂದಾಗುವ ಕಾಲ ಹತ್ತಿರ ಬಂದಿದೆ. ‘ಬಡೇ ಮಿಯಾ ಛೋಟೆ ಮಿಯಾ’ ಚಿತ್ರದಲ್ಲಿ ಟೈಗರ್​ಗೆ ನಾಯಕಿಯಾಗಿ ಶ್ರದ್ಧಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಹಿಂದೆ ‘ಎ ಪ್ಲೈಯಿಂಗ್ ಜಟ್’ ಮತ್ತು ‘ಭಾಗಿ’ ಸರಣಿಯ ಎರಡು ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು.

ಇದೀಗ ‘ಬಡೆ ಮಿಯಾ ...’ದಲ್ಲಿಯೂ ಮೋಡಿ ಮಾಡಲಿದೆ ಎನ್ನಲಾಗುತ್ತಿದೆ. 1998ರಲ್ಲಿ ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ಗೋವಿಂದ ನಟನೆಯ ‘ಬಡೆ ಮಿಯಾ ಛೋಟೆ ಮಿಯಾ’ ಸಿನಿಮಾ ತೆರೆಗೆ ಬಂದಿತ್ತು. ಇದೀಗ ಆ ಶೀರ್ಷಿಕೆಯನ್ನಷ್ಟೇ ಬಳಸಿ ಪೂಜಾ ಎಂಟರ್​ಟೈನ್​ವೆುಂಟ್ ಬ್ಯಾನರ್​ನಲ್ಲಿ ಹೊಸ ಚಿತ್ರ ನಿರ್ವಣವಾಗುತ್ತಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಮೊದಲೇ ಸುದ್ದಿಯಾದಂತೆ, ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಬಡೆ ಮಿಯಾ ಆಗಿ ನಟಿಸಿದರೆ, ಟೈಗರ್ ಚೋಟೆ ಮಿಯಾ ಆಗಲಿದ್ದಾರೆ. ಇದೀಗ ಶ್ರದ್ಧಾ ಹೆಸರೂ ಕೇಳಿಬಂದಿದ್ದು, ಇಂದು (ಫೆ. 6) ಅಧಿಕೃತ ಮಾಹಿತಿ ಹೊರಬೀಳಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net